ಬೆಂಗಳೂರು:- ನಗರದಲ್ಲಿ ಸುರಿದ ಭಾರಿ ಮಳೆಯಿಂದ ಮೆಟ್ರೋ ಹಳಿ ಮೇಲೆ ಮರ ವಾಲಿದ ಘಟನೆ ಜರುಗಿದೆ.
ಘಟನೆ ಪರಿಣಾಮ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸುಮಾರು 15 ನಿಮಿಷ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿತು.
ನಗರದಲ್ಲಿ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಹಲವೆಡೆ ರಸ್ತೆಗಳು ಕೆರೆಯಾದಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಈ ಮಧ್ಯೆ ಮಳೆಯಿಂದ ಮೆಟ್ರೋ ಹಳಿ ಮೇಲೆ ಮರವೊಂದು ವಾಲಿದೆ.
ಹೀಗಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಜೆ 4:50ರ ವೇಳೆ ಸುಮಾರು 15 ನಿಮಿಷಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದ ಸಮೀಪ ಘಟನೆ ನಡೆದಿತ್ತು.
ಸುಮಾರು 15 ನಿಮಿಷಗಳ ನಂತರ ಮೆಟ್ರೋ ಸಿಬ್ಬಂದಿ ಮರದ ಕೊಂಬೆಯನ್ನ ತೆರವು ಮಾಡಿ ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರ ತೆರವುಗೊಳಿಸಿದ ನಂತರ ಮೆಟ್ರೋ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.



