ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಉತ್ತರ ಒಳನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 27ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ರಾಯಚೂರು,
ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಗದಗ, ಧಾರವಾಡ, ಬೆಳಗಾವಿಯಲ್ಲಿ ಕೂಡ ಮಳೆಯಾಗಲಿದೆ.
ಆಗುಂಬೆ, ಇಂಡಿ, ಔರಾದ್, ಧರ್ಮಸ್ಥಳ, ಮಂಠಾಳ, ಹುಮ್ನಾಬಾದ್, ಝಲ್ಕಿ, ಬೀದರ್, ದೇವರಹಿಪ್ಪರಗಿ, ಇಳಕಲ್, ಕಮ್ಮರಡಿ, ಕುಮಟಾ, ಸಿಂಧನೂರು, ಉಡುಪಿ, ಬಿಳಗಿ, ಜೇವರಗಿ, ಕೋಟಾ, ಕೊಟ್ಟಿಗೆಹಾರ, ಮೂಡುಬಿದಿರೆ, ನೆಲೋಗಿ, ಶೋರಾಪುರ, ಸಿದ್ದಾಪುರ, ಬಸವನಬಾಗೇವಾಡಿ, ಭಾಗಮಂಡಲ, ಗಂಗಾವತಿ, ಗೇರುಸೊಪ್ಪ, ಗೋಕರ್ಣ, ಕೆಆರ್ ನಗರ, ಕಕ್ಕೇರಿ, ಹುಣಸಗಿ, ಗೇರುಸೊಪ್ಪ, ಜಯಪುರ, ಕೊಪ್ಪ, ಕಳಸ, ಸಿಂದಗಿ, ಎನ್ಆರ್ಪುರ, ಪುತ್ತೂರು, ಶೃಂಗೇರಿ, ಉಪ್ಪಿನಂಗಡಿಯಲ್ಲಿ ಮಳೆಯಾಗಿದೆ.



