ಕನ್ನಡ ಚಿತ್ರರಂಗದ ಖ್ಯಾತ ನಟ ಕಂ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಸಖತ್ ಆಫರ್ ಗಳು ಬರೋಕೆ ಶುರು ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಾಜ್ ಬಿ ಶೆಟ್ಟಿಗೆ ಇದೀಗ ಪರಭಾಷೆಯಿಂದಲೂ ಆಫರ್ ಬರೋಕೆ ಶುರುವಾಗಿದೆ. ಆದರೆ ರಾಜ್ ಮಾತ್ರ ತನಗೆ ಕನ್ನಡವೇ ಮೊದಲ ಆದ್ಯತೆ ಎನ್ನುತ್ತಿದ್ದಾರೆ.
ಸು ಫ್ರಮ್ ಸೋ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಜ್ ಬಿ ಶೆಟ್ಟಿಗೆ ಬಾಲಿವುಡ್ ದಿಗ್ಗಜರೆ ಮಣೆ ಹಾಕ್ತಿದ್ದಾರೆ. ಈಗಾಗಲೇ ಮಲಯಾಳಂನಲ್ಲೂ ನಟಿಸಿ ಸದ್ದು ಮಾಡಿರುವ ರಾಜ್ ಬಿ ಶೆಟ್ಟಿ ಹಿಂದೆ ಇದೀಗ ಬಾಲಿವುಡ್ ಸ್ಟಾರ್ ನಟರೇ ಹಿಂದೆ ಬಿದ್ದಿದ್ದಾರೆ. ಇದೀಗ ಸು ಫ್ರಮ್ ಸೋ ರೀತಿಯೇ ಅದನ್ನೇ ಬಾಲಿವುಡ್‌ಗೆ ಅನ್ವಯವಾಗುವಂತೆ ರಚಿಸಿ, ನಿರ್ದೇಶಿಸಲು ರಾಜ್ ಶೆಟ್ಟಿಗೆ ಬಾಲಿವುಡ್ ನಟ ಅಜಯ್ ದೇವಗನ್ ಈ ಆಫರ್ ನೀಡಿದ್ದಾರೆ. ಆದರೆ ಅವರು ಮಾತ್ರ ಸದ್ಯಕ್ಕೆ ಕನ್ನಡಕ್ಕೆ ತಮ್ಮ ಮೊದಲ ಆದ್ಯತೆ. ಕನ್ನಡದಲ್ಲಿ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಬೇಕಿದೆ ಎಂದಿದ್ದಾರೆ. ಜೊತೆಗೆ ಕನ್ನಡ ಇಂಡಸ್ಟ್ರಿಗೆ ಒಳ್ಳೆಯ ಕಂಟೆಂಟ್ ಸಿನಿಮಾದ ಅವಶ್ಯಕತೆ ಇದ್ದು ಅದೇ ಕಾರಣಕ್ಕೆ ಸದ್ಯದ ಮಟ್ಟಿಗೆ ಬೇರೆ ಇಂಡಸ್ಟ್ರಿಗೆ ಹೋಗುವ ಯೋಚನೆ ಇಲ್ಲ ಎಂದಿದ್ದಾರೆ.
ಮುಂಬಯಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ‘ಸು ಫ್ರಮ್ ಸೋ’ ನೋಡುತ್ತಿರುವುದಾಗಿ ಅವರೊಟ್ಟಿಗೆ ಸಿನಿಮಾ ನೋಡಲು ರಾಜ್ ಬಿ. ಶೆಟ್ಟಿ ಸೇರಿದಂತೆ ಸಿನಿಮಾ ಟೀಮ್‌ಗೆ ಆಹ್ವಾನ ನೀಡಿದ್ದರಂತೆ. ಆದರೆ ಸಿನಿಮಾ ತಂಡಕ್ಕೆ ಅಕ್ಷಯ್ ಕುಮಾರ್ ಜತೆಗೆ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ನಂತರ ಸಿನಿಮಾವೊಂದರ ಶೂಟಿಂಗ್‌ಗಾಗಿ ಊಟಿಗೆ ಬಂದಿದ್ದ ಸಂದರ್ಭದಲ್ಲಿ ಮತ್ತೆ ರಾಜ್ ಬಿ ಶೆಟ್ಟಿ ಅವರನ್ನು ಅಹ್ವಾನಿಸಿದ್ದಾರೆ. ಈ ವೇಳೆ ಕಾಮಿಡಿ ಜಾನರ್‌ನ ಸಾಕಷ್ಟು ಸಿನಿಮಾಗಳಲ್ಲಿ ಯಾವುದಾದರೂ ಕಥೆ ಇದ್ದರೆ ತಿಳಿಸಿ ಎಂದಿದ್ದಾರೆ. ಇದಕ್ಕೆ ರಾಜ್ ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ.


