ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ರಾಜ್ ಬಿ. ಶೆಟ್ಟಿ

0
Spread the love

ಕನ್ನಡ ಚಿತ್ರರಂಗದ ಖ್ಯಾತ ನಟ ಕಂ ನಿರ್ದೇಶಕ ರಾಜ್‌ ಬಿ ಶೆಟ್ಟಿ ‘ಸು ಫ್ರಮ್ ಸೋ’ ಚಿತ್ರದ ಬಳಿಕ ಮತ್ತಷ್ಟು ಖ್ಯಾತಿ ಘಳಿಸಿದ್ದಾರೆ. ಪರಭಾಷೆಯಲ್ಲೂ ಸದ್ದು ಮಾಡುತ್ತಿರುವ ಸು ಫ್ರಮ್‌ ಸೋ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಈ ಮಧ್ಯೆ ರಾಜ್‌ ಬಿ ಶೆಟ್ಟಿ ಸೋಶಿಯಲ್ ಮೀಡಿಯಾ​ಗೆ ಗುಡ್ ಬೈ ಹೇಳಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಅಂದ ಹಾಗೆ ಇದಕ್ಕೆ ಕಾರಣವನ್ನು ರಾಜ್‌ ತಿಳಿಸಿದ್ದಾರೆ.

Advertisement

ಸು ಫ್ರಮ್‌ ಸೋ ಸಿನಿಮಾದ ಬಳಿಕ ರಾಜ್‌ ಬಿ ಶೆಟ್ಟಿ ತಮ್ಮ ಮುಂದಿನ ಸಿನಿಮಾದ ಕೆಲಸಗಳ ಮೇಲೆ ಗಮನ ಹರಿಸಿದ್ದಾರೆ. ಬೇರೆ ಕೆಲಸಗಳ ಕಡೆ ಗಮನ ಹರಿಸಬೇಕಿರುವ ಕಾರಣದಿಂದ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಹಾಗಂತ ರಾಜ್‌ ಅವರ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಯಾವುದೇ ಪೋಸ್ಟ್​ಗಳು ಬರೋದಿಲ್ಲ ಎಂದರ್ಥವಲ್ಲ. ರಾಜ್ ಅವರ ತಂಡದವರು ಸೋಶಿಯಲ್ ಮೀಡಿಯಾ​ನ ಹ್ಯಾಂಡಲ್ ಮಾಡಲಿದ್ದಾರೆ.

ರಾಜ್ ಬಿ ಶೆಟ್ಟಿ ನಿರ್ಮಿಸಿ, ನಟಿಸಿರೋ ‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಗಿದ್ದು ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದು, ಪರಭಾಷೆಯಲ್ಲೂ ಸಿನಿಮಾ ಉತ್ತಮ ಕಲೆಕ್ಷನ್‌ ಮಾಡಿದೆ. ತಮಿಳು ಹಾಗೂ ಹಿಂದಿ ಭಾಷೆಗೆ ರಿಮೇಕ್ ಹಕ್ಕು ಮಾರಾಟ ಆಗಿದ್ದು ಸದ್ಯದಲ್ಲೇ ಸು ಫ್ರಮ್‌ ಸೋ ಸಿನಿಮಾ ಓಟಿಟಿಗೆ ಎಂಟ್ರಿಕೊಡಲಿದೆ.


Spread the love

LEAVE A REPLY

Please enter your comment!
Please enter your name here