ಒತ್ತಡಮುಕ್ತ ಜೀವನಕ್ಕಾಗಿ `ರಾಜಯೋಗ ಧ್ಯಾನ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸಿದ್ಧರಾಮೇಶ್ವರ ನಗರದ ಆಧ್ಯಾತ್ಮಿಕ ಸಂಸ್ಕೃತಿ ಭವನದಲ್ಲಿ ಮೇ.19ರಂದು ಬೆಳಿಗ್ಗೆ 8ಕ್ಕೆ ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ ಕಾರ್ಯಕ್ರಮ ಹಾಗೂ ಈ ವಾರ್ಷಿಕ ಬೃಹತ್ ಸೇವಾ ಯೋಜನೆಯ ಆರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ಜಯಂತಿ ಹೇಳಿದರು.

Advertisement

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬುಪರ್ವತದ ರಾಜಯೋಗಿನಿ ಬ್ರಹ್ಮಕುಮಾರಿಸ್ ಸಹ ಮುಖ್ಯ ಆಡಳಿತಾಧಿಕಾರಿ ಬಿ.ಕೆ. ಸುದೇಶ ದೀದೀಜಿ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಪ್ರಸನ್ನಕುಮಾರ್ ಶಾಬಾದಿಮಠ, ಸವಿತಾ ಶಿಗ್ಲಿ, ಡಾ. ಬಸನಗೌಡ ಕರಿಗೌಡ್ರ, ಡಾ. ಗಿರೀಶ ನಾಗರಾಳ, ರಾಜಶೇಖರ ಬಳ್ಳಾರಿ, ಡಾ. ಜಿ.ಬಿ. ಬಿಡಿನಹಾಳ, ಡಾ. ನಮೃತಾ ಸಜ್ಜನರ, ತಾತನಗೌಡ ಪಾಟೀಲ, ರಾಜೇಶ ಕಲ್ಯಾಣಶೆಟ್ಟಿ, ಬಿ.ಬಿ. ಅಸೂಟಿ, ಎಸ್.ಎನ್. ಗುಗ್ಗರಿ, ಬಿ.ಎಸ್. ಗೌಡರ ಸೇರಿದಂತೆ ಪ್ರಮುಖರು ಭಾಗವಹಿಸಿಲಿದ್ದಾರೆ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಈಶ್ವರೀಯ ಜ್ಞಾನ ಮತ್ತು ಸಹಜ ರಾಜಯೋಗ ಶಿಕ್ಷಣದ ಮೂಲಕ ಜಗತ್ತಿನ ಸುಮಾರು 140 ದೇಶದಲ್ಲಿ ಈ ವರ್ಷ ಪೂರ್ತಿ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಯೋಗ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಸೆಮಿನಾರ್‌ಗಳು, ವರ್ಕ್ಶಾಪ್, ಸಮ್ಮೇಳನ, ಎಕ್ಸಿಬಿಷನ್, ರ‍್ಯಾಲಿಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಆಯೋಜಿಸಿ ಜನತೆಯಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿ ಮಾನವನ ಮನವನ್ನು ಬೆಸೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here