ಗದಗ: ಗದಗ ನಗರದ ಲಯನ್ಸ್ ಕ್ಲಬ್‌ನ 2025-26ನೇ ಸಾಲಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಣ್ಯ ಉದ್ಯಮಿ, ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ಸದಸ್ಯರಾದ ರಾಜಣ್ಣ ಮಲ್ಲಾಡದ ಅವರನ್ನು ನಗರದ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿಲಯದ ಗೌರವಾಧ್ಯಕ್ಷ ಎಸ್.ಎಸ್. ಕಳಸಾಪೂರ, ಉಪಾಧ್ಯಕ್ಷ ಉಮೇಶ ಪೂಜಾರ, ಪದಾಧಿಕಾರಿಗಳಾದ ಗುರುಮೂರ್ತಿ ಮರೇಗುದ್ದಿ, ವೆಂಕಟೇಶ ಇಮರಾಪೂರ, ಮುತ್ತು ಜಡಿ ಮುಂತಾದವರು ಉಪಸ್ಥಿತರಿದ್ದರು.
Advertisement