ಗದಗ:- ಕೇಂದ್ರ ಹಾಗೂ ರಾಜ್ಯಕ್ಕೆ ಅಪಾಯ ಇದೆ ಎಂದು ನಾನು ಈ ಹಿಂದೆ ಹೇಳಿದ್ದೆ. ಅದು ಈಗ ನಿಜವಾಗಿದೆ ಎಂದು ಕೋಡಿಶ್ರೀ ಹೇಳಿಕೆ ನೀಡಿದ್ದಾರೆ.
ಗದಗನಲ್ಲಿ ಮಾತನಾಡಿದ ಕೋಡಿಶ್ರೀ ಗಳು, ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅರಸನ ಅರಮನೆಗೆ ಕಾರ್ಮೋಡ ಕವಿದಿತು, ಎರಡು ತಿಂಗಳ ಹಿಂದೆಯೇ ಕೇಂದ್ರ ಹಾಗೂ ರಾಜ್ಯಕ್ಕೆ ಅಪಾಯ ಆಗುತ್ತೆ ಅಂತ ನಾನು ಹೇಳಿದ್ದೆ. ಅದರಂತೆ ಕೇಂದ್ರದಲ್ಲಿ ಮೊದಲು ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ್ರು. ಈಗ ರಾಜ್ಯದಲ್ಲಿ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿದ್ದಾರೆ. ನಾವು ಯುಗಾದಿ ಹಾಗೂ ಸಂಕ್ರಾಂತಿ ಭವಿಷ್ಯ ಹೇಳುತ್ತೇವೆ. ರಾಜಕೀಯದಲ್ಲಿ ಕಾರ್ಮೋಡ ಇರೋದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಧರ್ಮಸ್ಥಳದ ವಿಚಾರವಾಗಿ ಮಾತನಾಡಿ, ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ ಇದರಲ್ಲಿ ಪ್ರಬಲವಾದದ್ದು, ಅಪಪ್ರಚಾರ. ದುರ್ಧೈವ ಇದರಲ್ಲಿ ಅಪಪ್ರಚಾರ ಮೊದಲು ಬಂದಿದೆ. ಸತ್ಯ ಹೊರಬರುವವರಿಗೆ ಆತ ಸತ್ತೇ ಹೊಗುತ್ತಾನೆ. ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಸತ್ಯ ಬರುವವರಿಗೆ ಕಾದು ನೋಡ್ಬೇಕು. ಒಳ್ಳೊಳ್ಳೆ ದೇವರ ಗುಡಿಗಳ ಪೂಜೆ ನಿಲುತ್ತಾ ಬರುತ್ತವೆ ನೋಡ್ರಿ ಎಂದರು.
ಹಣೆಗೆ ವಿಭೂತಿ ಇಟ್ಟು ಹಣೆ ಕೆತ್ತಿಸ್ಯಾರು, ನಾಮ ಇಟ್ರು ಅಳಿಸ್ಯಾರು. ಇವು ಕಾಲಜ್ಞಾನದಲ್ಲಿ ಬರುತ್ತೇವೆ, ಧರ್ಮಕ್ಕೆ ಅವಹೇಳನ ಮಾಡುವ ಕಾಲ ಬರುತ್ತಿವೆ. ಅದನ್ನು ಧೈರ್ಯವಾಗಿ ಎದುರಿಸಿ, ಧರ್ಮವನ್ನು ಉಳಿಸಿಕೊಳ್ಳಬೇಕು ಎಂದರು.
ಇನ್ನೂ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ಹಾಲು ಕೆಟ್ಟರು ಹಾಲು ಮತ ಕೆಡಂಗಿಲ್ಲಾ ಅಂತಾ ನಾನು ಈ ಹಿಂದೆ ಹೇಳಿದ್ದೆ. ಹಾಗಾಗಿ ಹಾಲು ಮತದವರಿಗೆ ಅಧಿಕಾರ ಬಂದ್ರೆ ವಾಪಸ್ಸ್ ಕಸಿದುಕೊಳ್ಳೋದು ಕಷ್ಟ. ಅವರಾಗಿ ಅಧಿಕಾರವನ್ನು ಬಿಡಬೇಕು. ಹಕ್ಕ ಬುಕ್ಕರು ವಿಜಯ ನಗರ ಸಾಮ್ರಾಜ್ಯ ಸ್ಥಾಪಿಸಿದವರು. ಹಕ್ಕು ಬುಕ್ಕರು ಮಾಡಿರೋ ವಿಜಯ ದಶಮಿ ಇವತ್ತು ನಡೆಯುತ್ತೇ. ಚಕ್ರಪತಿ ಶಿವಾಜಿ ಹಾಲು ಮತದವರೇ.. ಹಾಲು ಮತದವರಿಂದ ಸಮಾಜದಲ್ಲಿ ಲೋಕೋತ್ತರ ಕಾಣಿಕೆಗಳಿವೆ. ಅವರಿಗೆ ಒಂದು ರೀತಿಯ ದೈವ ಬಲ ಇದೆ. ಚುನಾವಣೆಯಲ್ಲಿ ಮೊದಲ ವೋಟ್ ಕೂಡಾ ಹಾಲುಮತದವರಿಂದ ಹಾಕಿಸುತ್ತಾರೆ ಎಂದರು.
ನಾನು ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಲ್ಲ. ಹಾಲು ಮತದವರಿಗೆ ಅಧಿಕಾರ ಬಂದ್ರೆ ಬಿಡಿಸಿಕೊಳ್ಳುವದು ಕಷ್ಟ. ಅವರಾಗಿ ಬಿಡಬೇಕು. ಕಳೆದ ಭಾರಿ 5 ವರ್ಷ ಸಿಎಂ ಆಗಿದ್ರು ಬಿಟ್ಟರಾ..?ನಾನು ವ್ಯಕ್ತಿ ಬಗ್ಗೆ ಹೇಳಿಲ್ಲಾ, ಸಮಾಜದ ಬಗ್ಗೆ ಹೇಳಿದ್ದೇನೆ ಎಂದರು.