HomeSports NewsIPL 2025: ಪಂದ್ಯ ಸೋತರೂ ಕಳಪೆ ದಾಖಲೆ ಮಾಡಿದ ರಾಜಸ್ಥಾನ್ ರಾಯಲ್ಸ್ ವೇಗಿ..!

IPL 2025: ಪಂದ್ಯ ಸೋತರೂ ಕಳಪೆ ದಾಖಲೆ ಮಾಡಿದ ರಾಜಸ್ಥಾನ್ ರಾಯಲ್ಸ್ ವೇಗಿ..!

For Dai;y Updates Join Our whatsapp Group

Spread the love

ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಈ ಪಂದ್ಯವು ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 5 ವಿಕೆಟ್‌ಗೆ 180 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ರಾಜಸ್ಥಾನ್ ರಾಯಲ್ಸ್ ಕೂಢ 20 ಓವರ್​​ಗಳ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 180 ರನ್‌ಗಳನ್ನು ಗಳಿಸಿತು.

ಇದರಿಂದಾಗಿ ಪಂದ್ಯವು ಟೈ ಆಯಿತು. ಸೂಪರ್ ಓವರ್‌ನಲ್ಲಿ ಗಾಯದ ಕಾರಣ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಲು ಬರಲಿಲ್ಲ. ಸೂಪರ್ ಓವರ್‌ನಲ್ಲಿ ರಾಜಸ್ಥಾನ 11 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ ತಂಡವು ನಾಲ್ಕನೇ ಎಸೆತದಲ್ಲಿ 13 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಇನ್ನೂ ಸಂದೀಪ್ ಶರ್ಮಾ 20ನೇ ಓವರ್​ನಲ್ಲಿ ಬರೋಬ್ಬರಿ 11 ಎಸೆತಗಳನ್ನು ಎಸೆದರು. ಇದು ಐಪಿಎಲ್​ ಇತಿಹಾಸದ ದೀರ್ಘಾವಧಿಯ ಓವರ್​ಗಳಲ್ಲಿ ಒಂದು ಎಂಬುದು ವಿಶೇಷ. ಅಂದರೆ ಐಪಿಎಲ್​ನಲ್ಲಿ ಈವರೆಗೆ ನಾಲ್ವರು ಬೌಲರ್​ಗಳು ಮಾತ್ರ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆದಿದ್ದಾರೆ.

ಇದಕ್ಕೂ ಮುನ್ನ 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊಹಮ್ಮದ್ ಸಿರಾಜ್ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆದಿದ್ದರು. ಇದಾದ ಬಳಿಕ 2023 ರಲ್ಲೇ ತುಷಾರ್ ದೇಶಪಾಂಡೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಒಂದು ಓವರ್​ನಲ್ಲಿ 11 ಎಸೆತಗಳನ್ನು ಬೌಲ್ ಮಾಡಿದ್ದರು. ಇನ್ನು 2025 ರಲ್ಲಿ ಕೆಕೆಆರ್ ವಿರುದ್ಧ ಒಂದೇ ಓವರ್​ನಲ್ಲಿ 11 ಎಸೆತ ಎಸೆದು ಶಾರ್ದೂಲ್ ಠಾಕೂರ್ ಈ ಹೀನಾಯ ದಾಖಲೆ ಸರಿಗಟ್ಟಿದ್ದರು.

ಇದೀಗ ಸಂದೀಪ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ಓವರ್​ನಲ್ಲಿ Wd, 0, Wd, Wd, Wd, N1, 4, 6, 1, 1, 1 ರನ್ ನೀಡುವ ಮೂಲಕ ಒಟ್ಟು 11 ಎಸೆತಗಳನ್ನು ಎಸೆದಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ಎಸೆತಗಳನ್ನು ಎಸೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!