Rajath: ಬಿಗ್‌ ಬಾಸ್‌ ಖ್ಯಾತಿಯ ರಜತ್ ಮತ್ತೆ ಅರೆಸ್ಟ್..!‌ ಯಾಕೆ ಗೊತ್ತಾ..?

0
Spread the love

ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ರಜಯ್ ಅವರನ್ನು ಬಂಧಿಸಿದ್ದಾರೆ. ರಜತ್ ಹಾಗೂ ವಿನಯ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ರಜತ್ ಹಾಗೂ ವಿನಯ್ ಬಂಧನ ಆಯಿತು.

Advertisement

ರೀಲ್ಸ್​ಗೆ ಬಳಕೆ ಮಾಡಿದ್ದ ಶಸ್ತ್ರಾಸ್ತ್ರವನ್ನು ಒಪ್ಪಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಈ ವೇಳೆ ರಬ್ಬರ್ ಮಚ್ಚು ನೀಡಲಾಯಿತು. ಇದು ಕಣ್ತಪ್ಪಿನಿಂದ ಆಗಿದ್ದು, ನಿಜವಾದ ಮಚ್ಚನ್ನು ನೀಡುತ್ತೇವೆ ಎಂದಿದ್ದರು. ಆ ಬಳಿಕ ರೀಲ್ಸ್​ಗೆ ಬಳಕೆ ಆದ ಮಚ್ಚನ್ನು ಎಸೆದಿದ್ದಾಗಿ ರಜತ್ ಒಪ್ಪಿಕೊಂಡಿದ್ದಾರೆ.

ಕೇಸ್​ನಲ್ಲಿ ಇದುವರೆಗೆ  ಬಳಕೆ ಮಾಡಿದ್ದ ಮಾರಕಾಸ್ತ್ರವನ್ನು ಪೊಲೀಸರ ಎದುರು ಹಾಜರು ಪಡಿಸಿಲ್ಲ. ಹೀಗಾಗಿ ಸಾಕ್ಷಿನಾಶ ಎಂದು ಸಹ ಪೋಲಿಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅತ್ತ ಕೋರ್ಟ್​ನಲ್ಲಿ ರಜತ್​ಗೆ ಜಾಮೀನು ನೀಡಲಾಗಿದೆ. ಈ ವೇಳೆ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಅವರು ವಿಚಾರಣೆಗೆ ಹಾಜರಿ ಹಾಕಲೇಬೇಕು ಎಂಬುದು ಕೂಡ ಆಗಿತ್ತು.

ಆದರೆ, ರಜತ್ ಅವರು ಕೋರ್ಟ್ ವಿಚಾರಣೆಗೆ ಹಾಜರಿ ಹಾಕಿಲ್ಲ. ಹೀಗಾಗಿ, ರಜತ್ ವಿರುದ್ಧ ನಾನ್ ಬೇಲೆಬೆಲ್ ವಾರಂಟ್ ಹೊರಡಿಸಿತ್ತು. ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಸೂಚಿಸಿತ್ತು. ಕೋರ್ಟ್ ಆದೇಶದಮೇರೆಗೆ ಪೊಲೀಸರು ಮತ್ತೊಮ್ಮೆ ರಜತ್​ನ ಬಂಧಿಸಿದ್ದಾರೆ. ಅವರನ್ನು 24ನೇ ಎಸಿಜೆಎಂ ಕೋರ್ಟ್​ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here