ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇನ್ನೇನು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ 2 ವಾರ ಬಾಕಿ ಉಳಿದಿದೆ. ಇದೀಗ ಈ ವಾರ ‘ಮಿಡ್ ವೀಕ್ ಎಲಿಮಿನೇಷನ್’ ಇದೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಭವ್ಯಾ ಹಾಗೂ ಮೋಕ್ಷಿತಾ ಸೇರಿ ರಜತ್ಗೆ ಸ್ಕೆಚ್ ಇಟ್ಟಿದ್ದಾರೆ.
ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಭವ್ಯಾಗೆ ಅನೇಕ ಬಾರಿ ರಜತ್ ಕಿವಿಮಾತು ಹೇಳಿದ್ದು ಇದೆ. ಆದರೆ, ಈಗ ಆಟದಲ್ಲಿ ಭವ್ಯಾ ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದಾರೆ. ಅವರಿಗೆ ಬೇಸರವೂ ಉಂಟಾಗಿದೆ.
ಹೌದು ಮೋಕ್ಷಿತಾ ಹಾಗೂ ಭವ್ಯ ಗೌಡ ಆಕ್ಷೇಪಾರ್ಹ ಪ್ಲಾನ್ ಒಂದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ. ರಜತ್ ಅವರನ್ನು ಟಾಸ್ಕ್ನಿಂದ ಹೊರಗಿಡಲು ಹೊಂಚು ಹಾಕಿದ್ದರು. ಅಂತೆಯೇ ರಜತ್ ಅವರ ಫೋಟೋ ಇರುವ ನೆಟ್ಗೆ ಮರದ ತುಂಡನ್ನು ಎಸೆಯುತ್ತಾರೆ. ಟಾಸ್ಕ್ ಮುಗಿದ ಬಳಿಕ ರಜತ್ ಮೋಕ್ಷಿತಾ ಮತ್ತು ಭವ್ಯಗೌಡಗೆ ಟಾಂಗ್ ಕೊಡ್ತಾರೆ. ನೀವಿಬ್ಬರು ಏನು ಮಾತನಾಡಿಕೊಂಡಿದ್ರಿ ಅಂತಾ ನನಗೆ ಚೆನ್ನಾಗಿ ಗೊತ್ತಿತ್ತು.
ಮೋಕ್ಷಿತಾ ನಿಮ್ಮಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರದಿಂದ ಹೇಳ್ತಾರೆ. ಅಲ್ಲದೇ ತ್ರಿವಿಕ್ರಂ ಕೂಡ ಮೋಕ್ಷಿತಾ ಮೇಲೆ ಗರಂ ಆಗಿದ್ದು, ಟಿಕೆಟ್ ಟು ಫಿನಾಲೆಗೆ ಹೋಗಬಾರದು ಎಂದು ನೀವು ಭವ್ಯ ಹೆಸರು ತೆಗೆದುಕೊಳ್ತೀರಿ. ನಾಮಿನೇಷನ್ನಿಂದ ದೂರ ಇರಬೇಕು ಅನ್ಕೊಂಡು ನೀವು ಅದೇ ಭವ್ಯ ಜೊತೆ ಸೇರಿಕೊಂಡು ಆಡ್ತೀರಿ ಎಂದು ಟಾಂಗ್ ನೀಡಿದ್ದಾರೆ.
ಆಗ ಮೋಕ್ಷಿತಾ ನಾವು ನಿಯತ್ತಾಗಿಯೇ ಆಡಿರೋದು ಎನ್ನುತ್ತಾರೆ. ಅದಕ್ಕೆ ತಿರುಗೇಟು ನೀಡಿರುವ ರಜತ್, ನಿಮ್ಮ ಸಮರ್ಥನೆ ಬೇಡ. ನಿನ್ನ ಮನಸ್ಸಿಗೆ ಏನು ಅಂತಾ ಗೊತ್ತು ಎಂದಿದ್ದಾರೆ. ಈ ಸಂಗತಿಗಳನ್ನು ಬಿಗ್ಬಾಸ್ ತನ್ನ ಪ್ರೊಮೋದಲ್ಲಿ ಶೇರ್ ಮಾಡಿದೆ.