ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ಘಾತಕ ಬೌಲಿಂಗ್ ಹಾಗೂ ಸೋಫಿ ಡಿವೈನ್ ಅವರ ಆಲ್ರೌಂಡರ್ ಪ್ರದರ್ಶನದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ 45 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಗುಜರಾತ್ ಜೈಂಟ್ಸ್ 2ನೇ ಸ್ಥಾನಕ್ಕೆ ಏರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ 45 ರನ್ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.
ಯುಪಿ ಪರ ಫೋಬೆ ಲಿಚ್ಫೀಲ್ಡ್ 32 ರನ್ ಹಾಗೂ ಕ್ಲೋಯ್ ಟ್ರಯಾನ್ 30 ರನ್ಗಳೊಂದಿಗೆ ಸ್ವಲ್ಪ ಪ್ರತಿರೋಧ ತೋರಿದರೂ, ಉಳಿದ 8 ಆಟಗಾರ್ತಿಯರು ಎರಡಂಕಿ ಅಂಕ ತಲುಪದ ಕಾರಣ ತಂಡದ ಸೋಲು ಅನಿವಾರ್ಯವಾಯಿತು. ಹ್ಯಾಟ್ರಿಕ್ ಸೋಲುಗಳಿಂದ ಸಂಕಷ್ಟದಲ್ಲಿದ್ದ ಗುಜರಾತ್ಗೆ ಈ ಗೆಲುವು ಪ್ಲೇಆಫ್ ಕನಸನ್ನು ಜೀವಂತವಾಗಿಟ್ಟಿದೆ.



