ತಾತನ ಫೋಟೋ ಶೇರ್ ಮಾಡಿದ ರಾಜ್ ಮೊಮ್ಮಗ: ವಿಶೇಷತೆ ಏನು ಗೊತ್ತಾ!?

0
Spread the love

ಆಡು ಮುಟ್ಟದ ಸೊಪ್ಪಿಲ್ಲ; ಅಣ್ಣಾವ್ರು ಮಾಡದ ಪಾತ್ರವಿಲ್ಲ’ ನಟರಾಗಿ, ಹಿನ್ನೆಲೆ ಗಾಯಕರಾಗಿ, ಕನ್ನಡ ಸಂಸ್ಕೃತಿಯ ಪ್ರತಿಬಿಂಬವಾಗಿ ಇಡೀ ದೇಶದಲ್ಲಿ ಖ್ಯಾತಿವೆತ್ತ ಹೃದಯವಂತ ನಟ ಡಾ.ರಾಜಕುಮಾರ್. ಇವರು ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ.

Advertisement

ಇದೇ ತಿಂಗಳು ಅಂದರೆ ಏಪ್ರಿಲ್ 12ಕ್ಕೆ ವರನಟನ ಕಳೆದುಕೊಂಡು 19 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಅವರ ಸಿನಿಮಾಗಳು, ಅವರ ಹಾಡುಗಳು, ಅವರ ನೆನಪುಗಳು ಅಜರಾಮರವಾಗಿವೆ. ಆದ್ರೆ ಇದರ ಮಧ್ಯೆ ಡಾ.ರಾಜ್​ಕುಮಾರ್ ಅವರ ಜೀವನದ ಅಪರೂಪದ ಫೋಟೋಗಳು ವೈರಲ್​ ಆಗಿವೆ.

ಹೌದು, ಡಾ. ರಾಜ್​ಕುಮಾರ್ ಅವರ ಎರಡು ಅಪರೂಪದ ಫೋಟೋಗಳನ್ನು ನಟ ರಾಮ್ ಕುಮಾರ್​ ಪುತ್ರ ಧೀರೆನ್ ರಾಮ್‌ಕುಮಾರ್ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ಆ ಫೋಟೋ ಜೊತೆಗೆ ಚಿಕ್ಕಮಾಮ ಅವರ “ಅಜಯ್” ಚಿತ್ರದ ವೇಷಭೂಷಣ ಪ್ರಯೋಗದ ಸಮಯದಲ್ಲಿ ಅಜ್ಜಿಯ ನೋಕಿಯಾ ಫೋನ್‌ನಲ್ಲಿ ಸೆರೆಹಿಡಿದ ನನ್ನ ಅಜ್ಜನ ಅಪರೂಪದ ಛಾಯಾಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ದಿ ರಿಯಲ್ ಕನ್ನಡಿಗ, ಸೂಪರ್ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here