ವಿಜಯಸಾಕ್ಷಿ ಸುದ್ದಿ, ಗದಗ : ಜೈಹೋ ಕರ್ನಾಟಕ ಪರಿವರ್ತನಾ ವೇದಿಕೆ, ಕಾರ್ಮಿಕ ಕಲ್ಯಾಣ ಸಂಸ್ಥೆ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ, ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘ, ಗದಗ ಜಿಲ್ಲೆಯ ಸಮಸ್ತ ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಕನ್ನಡ ರಾಜ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮ ಗದಗ ನಗರದ ಸಂಘದ ಕಾರ್ಯಾಲಯದಲ್ಲಿ ನೇರವೇರಿತು.
ದ್ವಜಾರೋಹಣವನ್ನು ಗೌರವಾಧ್ಯಕ್ಷ ಭೀಮಪ್ಪ ಪೂಜಾರ ನೇರವೇರಿಸಿದರು. ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಮಹ್ಮದ ಇರ್ಫಾನ್ ಡಂಬಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಪಿ. ಕರಿಸೋಮನಗೌಡ್ರ, ಜಿಲಾನಿ ಗುಳಗುಂದಿ, ರಮೇಶ ವಾಲ್ಮೀಕಿ, ಶಂಕರ ಗುರುಬಸಣ್ಣವರ, ಮಹಮ್ಮದಲಿ ರಾಮದುರ್ಗ, ಖಾದರ ಬಳ್ಳಾರಿ, ಶೌಕತ ಯರಂಡಿವಾಲೆ, ಏಕನಾಥ, ಮಂಜು, ಜುಬೇರ ಧಾರವಾಡ, ವಸಂತ ದೇವದುರ್ಗ, ನಾಶೀರ ಚಿಕೇನಕೊಪ್ಪ, ಮಮ್ಮದ ಯುಸೂಪ ಬೇಪಾರಿ, ಕರಿಯಪ್ಪ ವಿವಿಧ ಸಂಘಟನೆಯ ಕಾರ್ಮಿಕರು, ವ್ಯಾಪಾರಸ್ಥರು ಬಾಗವಹಿಸಿದ್ದರು.


