ಲಕ್ನೋ:- ಉತ್ತರ ಪ್ರದೇಶದ ಮುಜಫರ್ ಪುರ್ – ಮಿರಾಪುರ ಬೈಪಾಸ್ ರಸ್ತೆಯಲ್ಲಿ ರೈತ ಚಳುವಳಿಯ ಪ್ರಮುಖ ನಾಯಕ ರಾಕೇಶ್ ಟಿಕಾಯತ್ ಅವರ ಕಾರು ಅಪಘಾತಕ್ಕೀಡಾಗಿದೆ.
Advertisement
ಅದೃಷ್ಟವಶಾತ್ ಸೀಟ್ ಬೆಲ್ಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಕಾರು ರಸ್ತೆ ದಾಟುತ್ತಿದ್ದಾಗ ನೀಲಗೈಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಏರ್‌ಬ್ಯಾಗ್‌ಗಳು ಓಪನ್ ಆಗಿದ್ದು, ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಶುಕ್ರವಾರ ಸಂಜೆ 7:20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್ ಅವರು, ಅಪಘಾತದ ಸಮಯದಲ್ಲಿ ನಮಗೆ ಏನೂ ಅರ್ಥವಾಗಲಿಲ್ಲ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ನನಗೆ ಪ್ರಜ್ಞೆ ಬಂದಾಗ ಕಾರಿನ ಏರ್‌ಬ್ಯಾಗ್ ತೆರೆದಿತ್ತು. ಕಾರಿನಲ್ಲಿದ್ದವರೆಲ್ಲ ಸುರಕ್ಷಿತರಾಗಿದ್ದೇವೆ ಎಂದಿದ್ದಾರೆ.