ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಲೇಡೀಸ್ ಕ್ಲಬ್, ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮ ಹಾಗೂ ಬೆಟಗೇರಿಯ ಸಿಎಸ್‌ಐ ಬಾಸೆಲ್ ಮಿಷನ್ ಬಾಲಕರ ವಸತಿ ನಿಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಎರಡೂ ಕ್ಲಬ್‌ನ ಪದಾಧಿಕಾರಿಗಳು ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಪುಣ್ಯಾಶ್ರಮದ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಸಿಹಿ ವಿತರಿಸಿದರು. ನಂತರ ಬೆಟಗೇರಿಯ ಸಿಎಸ್‌ಐ ಬಾಸೆಲ್ ಮಿಷನ್ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಸಿಹಿ ವಿತರಿಸಿ ಉತ್ತಮ ಅಭ್ಯಾಸದೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಕೋಶಾಧ್ಯಕ್ಷ ರೇಣುಕಪ್ರಸಾದ ಹಿರೇಮಠ, ಲಯನ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಪೂಜಾ ಪಾಟೀಲ, ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಕೋಶಾಧ್ಯಕ್ಷೆ ಸ್ನೇಹಾ ಹಿರೇಮಠ, ಡಾ. ಜಗದೀಶ ಶಿರೋಳ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ರಮೇಶ ಶಿಗ್ಲಿ, ಪ್ರವೀಣ ವಾರಕರ, ನಿತೀಶ್ ಸಾಲಿ, ಅರವಿಂದ ಪಟೇಲ್, ರಘು ಮೇಹರವಾಡೆ, ಎಸ್.ಡಿ. ಪಾಟೀಲ, ವೀರೇಶ ಪಟ್ಟಣಶೆಟ್ಟಿ, ಮಂಜುನಾಥ ವೀರಲಿಂಗಯ್ಯನಮಠ, ಲಿಂಗರಾಜ ತೋಟದ, ವೀಣಾ ಸುಲಾಖೆ, ಸಾವಿತ್ರಿ ಶಿಗ್ಲಿ ಮುಂತಾದವರು ಪಾಲ್ಗೊಂಡಿದ್ದರು.