ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು, ಈಗಾಗಲೇ ಏಳು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಮನೆಯೊಳಗಿನ ಪ್ರತಿ ಬೆಳವಣಿಗೆಗೂ ಪ್ರೇಕ್ಷಕರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಗಿಲ್ಲಿಯ ಕಾಮಿಡಿ ಮತ್ತು ವರ್ತನೆ ಪ್ರೇಕ್ಷಕರಿಗೆ ವಿಶೇಷವಾಗಿ ಇಷ್ಟವಾಗಿದ್ದು, ಅವರು ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ಈ ಸೀಸನ್‌ನಲ್ಲಿ ಸಹ ಬಿಗ್ ಬಾಸ್ ಮನೆಯಲ್ಲಿ ಹಲವು ಜೋಡಿಗಳು ರೂಪುಗೊಂಡಿವೆ. ಅದರಲ್ಲಿ ಗಿಲ್ಲಿ ಮತ್ತು ಕಾವ್ಯಾ ಜೋಡಿ ಅತ್ಯಂತ ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ರಕ್ಷಿತಾ ಕೂಡ ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಗಿಲ್ಲಿ, ಕಾವ್ಯಾ ಅಥವಾ ಮುಂಚೆ ಸ್ಪಂದನಾ ಜೊತೆ ಮಾತನಾಡಿದಾಗ ರಕ್ಷಿತಾ ಬೇಜಾರು ಮಾಡಿಕೊಳ್ಳುತ್ತಿದ್ದ ಘಟನೆಗಳು ಕಂಡುಬಂದಿವೆ. ಕೆಲ ಸಂದರ್ಭಗಳಲ್ಲಿ ಗಿಲ್ಲಿ ಜೊತೆ ತಾವೊಬ್ಬರೇ ಕುಳಿತುಕೊಳ್ಳಲು ಇತರ ಬೀನ್ ಬ್ಯಾಗ್‌ಗಳನ್ನು ತೆಗೆದು ಹಾಕಿದ ಘಟನೆಯೂ ನಡೆದಿದೆ.
ಒಮ್ಮೆ ರಕ್ಷಿತಾ “ಗಿಲ್ಲಿಯಂಥ ಬಾಯ್‌ಫ್ರೆಂಡ್ ಬೇಕು” ಎಂದು ಹೇಳಿದ್ದರು. ಈ ವಿಚಾರ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಒಳಪಟ್ಟ ಬಳಿಕ, ರಕ್ಷಿತಾರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ.
ಗಿಲ್ಲಿ ಖಾಲಿ ಸಮಯದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಇತ್ತೀಚೆಗೆ ತಮ್ಮ ಹಾಗೂ ಕಾವ್ಯಾರ ಕಥೆಯನ್ನು ಕತೆಯ ರೂಪದಲ್ಲಿ ಹೇಳುವಾಗ, ರಕ್ಷಿತಾರ ವಿಷಯವನ್ನೂ ಸೇರಿಸಿ, ‘ರಕ್ಷಿತಾ ನನ್ನನ್ನು ಇಷ್ಟಪಡುತ್ತಾರೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ರಕ್ಷಿತಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ನನಗೆ ಗಿಲ್ಲಿ ಇಷ್ಟವಿಲ್ಲ. ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಅವರಿಗೆ ಇಲ್ಲ. ನಾನು ಜೀವನ ಸಂಗಾತಿಯಲ್ಲಿ ಹುಡುಕುವ ಗುಣಗಳು ಗಿಲ್ಲಿಯ ಬಳಿ ಇಲ್ಲ” ಎಂದು ಹೇಳಿದ್ದಾರೆ.
ನಂತರ ಕಾವ್ಯಾ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ, “ಗಿಲ್ಲಿಯ ಕೆಲ ಗುಣಗಳು ಇಷ್ಟವಾದರೂ, ಅವರ ಕೆಲವು ಸ್ವಭಾವ ನನಗೆ ಒಪ್ಪುತ್ತಿಲ್ಲ. ಅವುಗಳನ್ನು ಬದಲಾಯಿಸಿಕೊಳ್ಳಿ ಎಂದು ನಾನು ಹೇಳಿದ್ದೇನೆ. ಗಿಲ್ಲಿ ಬಗ್ಗೆ ಕೆಲ ಕಂಪ್ಲೇಂಟ್‌ಗಳೂ ನನಗೆ ಇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಫಿನಾಲೆ ಹಂತದಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಈ ಬದಲಾವಣೆ ಇದೀಗ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.



