ಜನಮನ ಸೂರೆಗೊಂಡ `ರಕ್ತರಾತ್ರಿ’ ನಾಟಕ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಬೆಂಗಳೂರಿನ ಮುದ್ದಿನಪಾಳ್ಯ ಸರ್ಕಲ್ ಬಳಿ ಹಿರಿಯ ರಂಗಕರ್ಮಿ ಬಿ.ಎಂ. ಗಂಗರಾಜು ಪಟೇಲ್ ಇವರ ಜನ್ಮದಿನೋತ್ಸವದ ಪ್ರಯುಕ್ತ ಏಳು ದಿನಗಳ ಕಾಲ ನೇಪಥ್ಯಕ್ಕೆ ಸರಿಯುತ್ತಿರುವ ಪೌರಾಣಿಕ ನಾಟಕಗಳ ಉಳಿವಿಗಾಗಿ ಪೌರಾಣಿಕ ನಾಟಕೋತ್ಸವ ಸಪ್ತಾಹವನ್ನು ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

Advertisement

ಮೂರನೇ ದಿನ ಉತ್ತರ ಕರ್ನಾಟಕದ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿಯ ಕಂದಗಲ್ಲು ಹನುಮಂತರಾಯ ಕಲಾ ಸಂಘದ ಕಲಾವಿದರು ಪ್ರದರ್ಶಿಸಿದ `ರಕ್ತರಾತ್ರಿ’ ನಾಟಕ ಪ್ರೇಕ್ಷಕರ ಮನ ಸೂರೆಗೊಂಡಿತು. ಇದಕ್ಕೂ ಮುನ್ನ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಪ್ರದರ್ಶನ ಉದ್ಘಾಟಿಸಿದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಾಂತಕುಮಾರ್ ಬೆಂಗಳೂರು, ಹಿರಿಯ ರಂಗಕರ್ಮಿ ಡಾ.ಮಾಯಣ್ಣ ಗೌಡರು ಬೆಂಗಳೂರು, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ.ರಮೇಶ್ ಹಂಚಿನಮನೆ, ಕಲಾಸಂಘದ ಕಾರ್ಯದರ್ಶಿ ಹಾಗು ನಾಟಕದ ನಿರ್ದೇಶಕ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಇನ್ನುಳಿದಂತೆ ಎಸ್.ಎಸ್.ವಿರುಪಾಕ್ಷಪ್ಪ ಹೇಗ್ಡಾಳ್ (ಶಕುನಿ), ಧನಂಜಯ ಕಣವಿ ನಾಯಕನಹಳ್ಳಿ (ಕರ್ಣ, ಗಂದರ್ವ), ತೋಟದ ಮನೆ ಮಾರುತೆಪ್ಪ ಹ್ಯಾಳ್ಯಾ (ಅರ್ಜುನ), ಬಸವರಾಜ ಹರೇಗೋಂಡನಹಳ್ಳಿ (ಕಲಿ, ಶಿವ), ಬಸವರಾಜ್‌ಸ್ವಾಮಿ ಜವಳಗೇರಾ (ಧರ್ಮರಾಯ) ತಮ್ಮ ಅತ್ಯುತ್ತಮ ನಟನೆಯಿಂದ ಜನ ಮೆಚ್ಚುಗೆಗೆ ಪಾತ್ರರಾದರು. ಬಳ್ಳಾರಿ ವೀಣಾ ಆದೋನಿ (ದ್ರೌಪದಿ), ಕಾಶಿಬಾಯಿ ದಾವಣಗೆರೆ (ಉತ್ತರೆ), ಜಯಶ್ರೀ ಪಾಟೀಲ್ (ಭಾನುಮತಿ), ಕಾವ್ಯ ಮೈಸೂರು (ಅನಂಗಪುಷ್ಪ) ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರು. ನಾಟಕದ ನಿರ್ದೇಶಕ, ಹರ‍್ಮೋನಿಯಂ ಮಾಂತ್ರಿಕ ತಿಪ್ಪೇಸ್ವಾಮಿ ಸೂಲದಹಳ್ಳಿ ಮೈ ನವಿರೇಳಿಸುವ ಸಂಗೀತ ನೀಡಿದರು. ಆಕಾಶವಾಣಿ ಕಲಾವಿದ ಪಿ. ಚಂದ್ರಶೇಖರ್ ದಾವಣಗೆರೆ ತಬಲಾ ಸಾತ್ ನೀಡಿದರು.

ಚಾಮುಂಡೇಶ್ವರಿ ಡ್ರಾಮ ಸೀನ್ಸ್ ಮೈಸೂರು ಭವ್ಯ ರಂಗಸಜ್ಜಿಕೆ, ಮನ ಸೆಳೆಯುವ ಪ್ರಸಾದನದೊಂದಿಗೆ ಸೂಲದ ಹಳ್ಳಿ ತಿಪ್ಪೇಸ್ವಾಮಿ ನೇತೃತ್ವದ ತಂಡ ರಾಜ್ಯಧಾನಿಯಲ್ಲಿ ಅದ್ಭುತ ನಟನೆಯೊಂದಿಗೆ ಜನಮಾನಸದಲ್ಲಿ ಉಳಿಯುವಂಥ ಪ್ರದರ್ಶನ ನೀಡಿತು.

ಮಾಯಣ್ಣ ಗೌಡ, ವ್ಯವಸ್ಥಾಪಕ ಕುಮಾರಗೌಡ ಕಳಸ್ತವಾಡಿ ನಾಟಕ ಪ್ರದರ್ಶನ ನಿರ್ವಹಿಸಿದರು.

ಕಿಕ್ಕಿರಿದು ಸೇರಿದ್ದ ಜನಸ್ತೋಮನದ ಮಧ್ಯೆ ತಮ್ಮ ಅಭಿನಯ, ಸಂಭಾಷಣಾ ಶೈಲಿ, ಹಾವಭಾವಗಳಿಂದ ಹಗರಿಬೊಮ್ಮನಹಳ್ಳಿಯ ಕಲಾವಿದ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ರಮೇಶ್ ಹಂಚಿನಮನೆ (ಭೀಮ), ಖ್ಯಾತ ವಕೀಲರಾದ ಹರೆಗೊಂಡನಹಳ್ಳಿ ಡಾ.ಡಿ. ಉಮಾಶಂಕರಗೌಡ (ದುರ್ಯೋಧನ), ಕೊಪ್ಪಳ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ, ಪತ್ರಕರ್ತ ಹಾಗು ಚಿತ್ರನಟ ಗಂಗಾವತಿ ನಾಗರಾಜ್ ಇಂಗಳಗಿ (ಅಶ್ವತ್ಥಾಮ), ಹಿರಿಯ ಕಲಾವಿದ ನರೇಂದ್ರ ಜಿ.ಹೊಳಲು (ಕೃಷ್ಣ) ಇವರು ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.


Spread the love

LEAVE A REPLY

Please enter your comment!
Please enter your name here