ವಿಜಯಸಾಕ್ಷಿ ಸುದ್ದಿ, ಗದಗ: ರಂಜಾನ್ ಹಬ್ಬವು ಮುಸ್ಲಿಂ ಬಾಂಧವರ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಪವಿತ್ರ ರಂಜಾನ್‌ನಲ್ಲಿ ಒಂದು ತಿಂಗಳ ಉಪವಾಸ ಮಾಡುವದರಿಂದ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತದೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಧರ್ಮದ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಪಾಪಗಳಿಂದ ಮೋಕ್ಷ ಸಿಗುತ್ತದೆ ಎಂದು ಡಾ. ಪ್ಯಾರಅಲಿ ನೂರಾನಿ ಅವರು ಹೇಳಿದರು.
Advertisement
ನಗರದ ಇರಾನಿ ಕಾಲೋನಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಹಾರ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಖೋಜಾ ಜಮಾತ್ ನೇತೃತ್ವದಲ್ಲಿ 180ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ರಂಜಾನ್ ಚಾರಿಟಿ ಫುಡ್ ಕಿಟ್‌ಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಎಂ.ಸೈಯಾನಿ, ಆರಿಫ್ ಲಖಾನಿ, ರೆಹಾನ್ ಲಖಾನಿ, ಮೌಲಾನಾ ಅಮೀರ ಹುಸೇನ್ ಸಾಬ್, ಇರಾನಿ ಕಾಲೋನಿ ಮುಖ್ಯಸ್ಥರಾದ ಅಕ್ಬರ್‌ಅಲಿ ಸೇರಿದಂತೆ ಎಲ್ಲಾ ಸ್ಥಳೀಯ ಫಲಾನುಭವಿಗಳು, ಖೋಜಾ ಜಮಾತ್ ತಂಡದವರು ಉಪಸ್ಥಿತರಿದ್ದರು.