ಪ್ರೀತಿಸಿದ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ BIGGBOSS ಖ್ಯಾತಿಯ ರಂಜಿತ್!

0
Spread the love

ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್​ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಇಂದು ಪ್ರೀತಿಸಿದ ಹುಡುಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೊಡ್ಡಬಳ್ಳಾಪುರ ಸಿಂಗನಾಯಕನಹಳ್ಳಿನಲ್ಲಿ ನಟ ರಂಜಿತ್​ ಕುಮಾರ್ ಹಾಗೂ ಮಾನಸ ಅವರ  ಮದುವೆ ನಡೆದಿದೆ.

Advertisement

ಪ್ರೀತಿಸಿದ ಹುಡುಗಿ ಮಾನಸಾ ಅವರನ್ನೆ ರಂಜಿತ್ ಮದುವೆ ಆಗಿದ್ದಾರೆ. ಡಿಸೈನರ್ ಆಗಿರೋ ಮಾನಸಾ ಮತ್ತು ರಂಜಿತ್ ಅವರ ಮದುವೆ ಜೋರಾಗಿಯೇ ನಡೆದಿದೆ. ಎಲ್ಲ ಶಾಸ್ತ್ರಗಳೊಂದಿಗೆ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದೆ.

ಇನ್ನೂ ರಂಜಿತ್​ ಕುಮಾರ್ ಹಾಗೂ ಮಾನಸಾ ಮದುವೆಗೆ ಬಿಗ್​ಬಾಸ್​ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದಾರೆ. ತುಕಾಲಿ ಸಂತೋಷ್​ ಹಾಗೂ ಮಾನಸಾ ಸಂತೋಷ್, ಲಾಯರ್ ಜಗದೀಶ್​, ಗೋಲ್ಡ್​ ಸುರೇಶ್, ಅನುಷಾ ರೈ, ಯಮುನಾ ಶ್ರೀನಿಧಿ ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here