ಬೆಂಗಳೂರು: ಸರ್ಕಾರದಲ್ಲಿ ಯಾರೇ ಭಾಗಿಯಾಗಿದ್ದರೂ, ತನಿಖೆಯಿಂದ ಹೊರಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ರನ್ಯಾ ರಾವ್ ಕೇಸ್ ವಿಚಾರವಾಗಿ ಮಾತನಾಡಿ, ಮಾಧ್ಯಮದಲ್ಲಿ ಏನು ಬರುತ್ತಿದೆಯೋ, ನನಗೂ ಅದಷ್ಟೇ ಗೊತ್ತಿದೆ.
Advertisement
ನನ್ನ ಹತ್ರ ಇಂಟೆಲಿಜೆನ್ಸ್ ಇಲ್ಲ. ಗೃಹ ಸಚಿವರು ಮತ್ತು ಸಿಎಂ ಸಾಹೇಬ್ರಿಗೆ ಗೊತ್ತಿದೆ. ಸರ್ಕಾರದಲ್ಲಿ ಯಾರೇ ಭಾಗಿಯಾಗಿದ್ದರೂ, ತನಿಖೆಯಿಂದ ಹೊರಬರುತ್ತದೆ ಎಂದು ತಿಳಿಸಿದರು.
ಇನ್ನೂ 5 ವರ್ಷ ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಾಹೇಬರು ಹಿರಿಯ ನಾಯಕರು. ಅವರು ಮಾಸ್ ಲೀಡರ್, ಸರ್ಕಾರವನ್ನು ಚೆನ್ನಾಗಿ ನಡೆಸುತ್ತಿದ್ದಾರೆ. ಅವರು ಏನೇ ಹೇಳಿದರು ನಮ್ಮ ಆಶೀರ್ವಾದ ಇರುತ್ತದೆ ಎಂದರು.