ಬೆಂಗಳೂರು:- ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಡಿಆರ್ ಐ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸಾಹಿಲ್ ಜೈನ್ ಎಂದು ಗುರುತಿಸಲಾಗಿದೆ. ಈತ ಬಳ್ಳಾರಿ ಮೂಲದವ ಎನ್ನಲಾಗಿದೆ. ಪ್ರಕರಣದಲ್ಲಿ ಈಗಾಗಲೇ ರನ್ಯಾ ರಾವ್, ತರುಣ್ ಬಂಧಿಸಿರುವ ಡಿಆರ್ ಐ, ಇದೀಗ ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮಾರ್ಚ್ 29 ರವರೆಗೂ ಕಸ್ಟಡಿಗೆ ಪಡೆದಿದೆ.
ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದ ಆರೋಪಿ ಸಾಹಿಲ್ ಜೈನ್, ಬೆಂಗಳೂರಿನಲ್ಲೂ ಬ್ರಾಂಚ್ ಹೊಂದಿದ್ದ ಎನ್ನಲಾಗಿದೆ. ಈತ ರನ್ಯಾರಾವ್ ಮತ್ತು ತರುಣ್ ರಾಜ್ ಜತೆ ನಿರಂತರ ಸಂಪರ್ಕದಲ್ಲಿ ಇರ್ತಿದ್ದ. ಅಕ್ರಮವಾಗಿ ತರುತ್ತಿದ್ದ ಚಿನ್ನಾಭರಣ ಹಾಗೂ ಚಿನ್ನದ ಪೀಸ್ ಗಳನ್ನು ಖರೀದಿ ಮಾಡುತ್ತಿದ್ದ. ಬಳಿಕ ಅವುಗಳನ್ನು ಕರಗಿಸಿ ಬಂದ ಹಣವನ್ನು ಕೊಡುತ್ತಿದ್ದ. ಈತನಿಗೆ ಶೇಕಡವಾರು 10-15ರಷ್ಟು ಕಮಿಷನ್ ಕೊಡಲಾಗುತ್ತಿತ್ತು ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ.