ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ನೀಡಬೇಕಿದ್ದ ತೀರ್ಪನ್ನು ಮುಂದೂಡಿಕೆ ಮಾಡಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್ಗಳು ದಾಖಲಾಗಿವೆ. ಈ 4 ಕೇಸ್ಗಳ ಪೈಕಿ ಈಗ ಮೊದಲ ಕೇಸ್ನ ತೀರ್ಪು ಇವತ್ತು ಪ್ರಕಟವಾಗಬೇಕಿತ್ತು. ಆದ್ರೆ ವಿಚಾರಣೆ ಆರಂಭವಾಗ್ತಿದ್ದಂತೆ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆ ಕೇಳಿದ ನ್ಯಾಯಾಲಯ ಬಳಿಕ ಆಗಸ್ಟ್ 1ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.
ಗೂಗಲ್ ಮ್ಯಾಪ್ ಆಧರಿಸಿ ಎರಡು ಕಡೆ ವಾದ ಮಂಡನೆ ನಡೆದಿದೆ. ಗೂಗಲ್ ಸಂಸ್ಥೆ ಅಧಿಕೃತ ಮಾಹಿತಿ ಇಲ್ಲದೆ ದಾಖಲೆ ಪರಿಗಣಿಸಬಹುದೇ ಎಂದು ನ್ಯಾ. ಸಂತೋಷ್ ಗಜಾನನ ಭಟ್ ಪ್ರಶ್ನಿಸಿದ್ರು. ಸದ್ಯ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆ ಕೇಳಿದ ನ್ಯಾಯಾಲಯ ಬಳಿಕ ಆಗಸ್ಟ್ 1ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.