ಗಂಡುಮಕ್ಕಳ ಹಾಸ್ಟೆಲ್ ನಲ್ಲಿ ಯುವತಿ ಮೇಲೆ ರೇಪ್ ಕೇಸ್: ಆರೋಪಿಗೆ ಜಾಮೀನು

0
Spread the love

ಬಾಗಲಕೋಟೆ:- ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿ ಮೇಲೆ ನಡೆದ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.

Advertisement

ಕೋಲ್ಕತ್ತಾ ಐಐಎಂ ಕಾಲೇಜು ಹಾಸ್ಟೆಲ್‌ಗೆ ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ವಿದ್ಯಾರ್ಥಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಆರೋಪಿ ಪರಮಾನಂದ ಟೋಪಣ್ಣನವರ್‌ಗೆ ಕೋಲ್ಕತ್ತಾದ ಅಲಿಪುರ 9 ಜೆಎಂಎಫ್‌ಸಿ ಕೋರ್ಟ್ ಶನಿವಾರ ಸಂಜೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರಮಾನಂದ ಪರ ವಕೀಲ ವರುಣ್ ಪಾಟೀಲ್, ಮಹೇಂದ್ರ.ಜಿ ಬೇಲ್ ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿ ವಿಚಾರಣೆ ಮಾಡಿದ ಕೋರ್ಟ್ 50,000 ರೂ. ಬಾಂಡ್ ನೀಡುವಂತೆ ಸೂಚಿಸಿತು. ಪಾಸ್‌ಪೋರ್ಟ್ ಜಪ್ತಿ ಮಾಡಿದ್ದು, ಕೋಲ್ಕತ್ತಾದಿಂದ ಹೊರ ಹೋಗದಂತೆ ಷರತ್ತು ವಿಧಿಸಿದೆ ಎಂದು ವಕೀಲ ವರುಣ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ:

ಆರೋಪಿಯು ಕೊಲ್ಕತ್ತಾದ ಜೋಕಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ 2ನೇ ವರ್ಷದ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ. ಆರೋಪಿಯ ವಿರುದ್ಧ ಯುವತಿಯು, ಹಾಸ್ಟೆಲ್‌ಗೆ ಕರೆಸಿಕೊಂಡು ಫಿಜ್ಜಾ ತಿನ್ನಿಸಿ, ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ಹರಿದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಜು.12ರಂದು ಪರಮಾನಂದನನ್ನ ಬಂಧಿಸಿದ್ದರು.


Spread the love

LEAVE A REPLY

Please enter your comment!
Please enter your name here