ನವದೆಹಲಿ:- ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಏರ್ಪೋರ್ಟ್ನಲ್ಲಿ ದೇಶ ಭ್ರಷ್ಟ ಉದ್ಯಮಿ ಲಲಿತ್ ಮೋದಿಯ ಸಹೋದರ ಸಮೀರ್ ಮೋದಿಯನ್ನು ಬಂಧನ ಮಾಡಲಾಗಿದೆ.
ದೂರುದಾರ ಮಹಿಳೆ ಮತ್ತು ಸಮೀರ್ ಮೋದಿ ವಕೀಲರು ಈ ವಿಷಯದ ಬಗ್ಗೆ ಹಲವು ಬಾರಿ ಚರ್ಚಿಸಿದ್ದರು. ಪ್ರಕರಣವನ್ನು ಇತ್ಯರ್ಥಪಡಿಸಲು ಮಹಿಳೆ 50 ಕೋಟಿ ರೂ. ಬೇಡಿಕೆ ಇಟ್ಟಿದ್ದರು, ಆದರೆ ಸಮೀರ್ ಮೋದಿ ಹಣ ನೀಡಲು ನಿರಾಕರಿಸಿದರು. ಮಹಿಳೆಯ ಒತ್ತಡದಿಂದಾಗಿ ದೆಹಲಿ ಪೊಲೀಸರು ಸಮೀರ್ ಮೋದಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಮೀರ್ ಮೋದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರ ಕುಟುಂಬ ಮತ್ತು ಅವರ ವಕೀಲರು ಸಹ ಸ್ಥಳದಲ್ಲಿದ್ದಾರೆ. ಅವರ ಕುಟುಂಬವು ಈ ವಿಷಯದ ಬಗ್ಗೆ ಹಿರಿಯ ವಕೀಲರೊಂದಿಗೆ ಚರ್ಚೆ ನಡೆಸುತ್ತಿದೆ. ಪ್ರಸ್ತುತ, ಕುಟುಂಬವು ಯಾವುದೇ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗಿದೆ.



