ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಗಂಜೀ ಬಸವೇಶ್ವರ ಭಜನಾ ಸಂಘದ ವತಿಯಿಂದ ಗಜಾನನೋತ್ಸವ ಸಮಿತಿ ಉಸಗಿನಗಟ್ಟಿ ಓಣಿ ಗದಗ ಇವರ ನೇತೃತ್ವದಲ್ಲಿ 29ನೇ ವರ್ಷದ ಗಜಾನನೋತ್ಸವ ಅಂಗವಾಗಿ ಸೆ.13ರಂದು ಶ್ರೀ ಗುರೂಜಿ ಮೆಲೋಡಿಯಸ್ ಇವೆಂಟ್ಸ್ ಗದಗ ಇವರಿಂದ ರಾತ್ರಿ 8 ಗಂಟೆಗೆ ಸಾರ್ವಜನಿಕ ರಸಮಮಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Advertisement
ಸೆ. 15ರಂದು ಗಣೇಶ ಮೂರ್ತಿಯ ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಉಸಗಿನಗಟ್ಟಿ ಓಣಿಯ ಗಜಾನನೋತ್ಸವ ಸಮಿತಿ ಅಧ್ಯಕ್ಷ ಪ್ರಭು ಕಲಬಂಡಿ, ಉಪಾಧ್ಯಕ್ಷ ಸಿದ್ಧಲಿಂಗೇಶ ಸಂಗನಾಳ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.