ಗದಗ: ತಮ್ಮ 3 ಎಕರೆ ಜಮೀನನ್ನು ಶಿಕ್ಷಣ ಮತ್ತು ಧರ್ಮ ಕಾರ್ಯಕ್ಕೆ ದಾನ ನೀಡಿದ ಶಿರಹಟ್ಟಿ ಪಟ್ಟಣದ ನಿವಾಸಿ ರಶೀದ್ ಢಾಲಾಯತ್ ಹಾಗೂ ಇತರ ಸಾಧಕ ಮಹನೀಯರನ್ನು ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘವು ಗದುಗಿನ ಕನಕ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ನಾಗರಿಕ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಗದಗ ಜಿಲ್ಲಾ ಘಟಕವು ಸನ್ಮಾನಿಸಿ ಗೌರವಿಸಿತು.



