ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ: ಬೆಲೆ ಎಷ್ಟು ಗೊತ್ತಾ?

0
Spread the love

ನಟಿ ರಶ್ಮಿಕಾ ಮಂದಣ್ಣ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊಡಗಿನ ಬೆಡಗಿ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ನಟಿಸಿದ ಸಿನಿಮಾಗಳೆಲ್ಲಾ ಸೂಪರ್‌ ಹಿಟ್‌ ಆಗುತ್ತಿದೆ. ಇದೇ ಖುಷಿಯಲ್ಲಿ ನಟಿ ದುಬಾರಿ ಕಾರೊಂದನ್ನ ಖರೀದಿ ಮಾಡಿದ್ದಾರೆ.

Advertisement

ರಶ್ಮಿಕಾ ಮಂದಣ್ಣ ಮರ್ಸಿಡೀಸ್ ಎಸ್ 450 ಕಾರನ್ನು ಖರೀದಿ ಮಾಡಿದ್ದಾರೆ. ರಶ್ಮಿಕಾರ ಇಷ್ಟದ ಬಣ್ಣವಾದ ಕಪ್ಪು ಬಣ್ಣದ ಕಾರನ್ನೇ ಖರೀದಿ ಮಾಡಿದ್ದು, ಸೆಡಾನ್ ಮಾದರಿಯ ಕಾರು ಇದಾಗಿದೆ. ಅಂದಹಾಗೆ ಮರ್ಸಿಡೀಸ್ ಎಸ್ 450 ಕಾರಿನ ಬೆಲೆ ಸುಮಾರು 2.25 ಕೋಟಿ ರೂಪಾಯಿ. ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯುತ್ತಮ ಸೌಲಭ್ಯಗಳು, ಸೌಕರ್ಯಗಳು ಹಾಗೂ ಸೇಫ್ಟಿ ಫೀಚರ್ಸ್​ ಇದೆ.

ಅಂದಹಾಗೆ ರಶ್ಮಿಕಾ ಬಳಿ ಇನ್ನೂ ಕೆಲವು ಐಶಾರಾಮಿ ಕಾರುಗಳಿವೆ. ಕೆಲ ವರ್ಷದ ಹಿಂದಷ್ಟೆ ಕಪ್ಪು ಬಣ್ಣದ ಲ್ಯಾಂಡ್ ರೋವರ್ ಕಾರೊಂದನ್ನು ರಶ್ಮಿಕಾ ಮಂದಣ್ಣ ಖರೀದಿ ಮಾಡಿದ್ದರು. ಅದಾದ ಬಳಿಕ ಇನ್ನೋವಾ ಕ್ರಿಸ್ಟಾ ಕಾರೊಂದನ್ನು ಸಹ ಖರೀದಿ ಮಾಡಿದರು. ಒಂದು ಮಿನಿ ಕೂಪರ್ ಕಾರು ಸಹ ರಶ್ಮಿಕಾ ಮಂದಣ್ಣ ಬಳಿ ಇದೆಯಂತೆ. ಅವರ ತಂದೆಗೆ ಒಂದು ಇನ್ನೋವಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇದೀಗ 2.25 ಕೋಟಿ ಮೌಲ್ಯದ ಕಾರು ಖರೀದಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here