ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟಿ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಇದೀಗ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ರಿಲೀಸ್ ಆಗಿದೆ.
‘ದಿ ಗರ್ಲ್‌ಫ್ರೆಂಡ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಮತ್ತೊಬ್ಬ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸಿವೆ. ಅಲ್ಲು ಅರ್ಜುನ್ ತಂದೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ. ಇದು ಪ್ರಮೋಷನಲ್ ಸಾಂಗ್ ಅಲ್ಲ. ಚಿತ್ರದ ಒಳಗೇನೆ ಬರೋ ಒಂದು ಹಾಡು. ಆದರೆ, ಇದು ಚಿತ್ರದ ತಂಡವೇ ರಿಲೀಸ್ ಮಾಡಿದ ಮೊದಲ ಹಾಡಾಗಿದೆ.
ಸದ್ಯು ದಿ ಗರ್ಲ್‌ಫ್ರೆಂಡ್ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ರಿಲೀಸ್ ತಯಾರಿನೂ ಶುರು ಆಗಿದೆ. ಪ್ರಚಾರಕ್ಕಾಗಿಯೇ ಚಿತ್ರದ ಮೊದಲ ಹಾಡನ್ನು ಈಗ ರಿಲೀಸ್ ಮಾಡಲಾಗಿದೆ.
ದಿ ಗರ್ಲ್‌ಫ್ರೆಂಡ್ ಚಿತ್ರದ ಸ್ವರವೇ ಹಾಡು ಬಹು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹೀಗೆ ಎಲ್ಲ ಭಾಷೆಯಲ್ಲೂ ರಿಲೀಸ್ ಆಗಿದೆ. ದಕ್ಷಿಣ ಭಾರತದ ರೊಮ್ಯಾಂಟಿಕ್ ಹಾಡುಗಳ ಸರದಾರ, ಮಲಯಾಳಂ ಸಿನಿಮಾರಂಗದ ಹೇಶಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿ ಹಾಡಿರುವುದು ವಿಶೇಷ. ಈ ಹಾಡು ಈಗ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.