ಮತ್ತೊಂದು ಬಾಲಿವುಡ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ: ಶಾಹಿದ್ ಕಪೂರ್‌ʼಗೆ ಜೋಡಿಯಾದ ಶ್ರೀವಲ್ಲಿ!

0
Spread the love

ರಶ್ಮಿಕಾ ಮಂದಣ್ಣ ಸತತ ಸೂಪರ್ ಹಿಟ್ ಸಿನಿಮಾ ನೀಡಿ ಭಾರತದ ಸಕ್ಸಸ್‌ಪುಲ್ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆ್ಯನಿಮಲ್, ಪುಷ್ಪಾ2, ಛಾವ ಸಿನಿಮಾ ರಶ್ಮಿಕಾ ಕರಿಯರ್‌ಗೆಬಹುದೊಡ್ಡ ತಿರುವು ನೀಡಿದ ಸಿನಿಮಾಗಳು.

Advertisement

ಆದರೆ ಇದರ ಬೆನ್ನಲ್ಲೇ ಬಿಡುಗಡೆಯಾದ ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಸಿಕಂದರ್ ಸಿನಿಮಾ ಹಿನ್ನಡೆಯಿಂದ ರಶ್ಮಿಕಾ ಸಿನಿ ಕರಿಯರ್‌ಗೂ ಹಿನ್ನಡೆಯಾಗಿದೆ. ಆದ್ರೂ ಕೂಡ ಬಾಲಿವುಡ್‌ನ ಮತ್ತೊಂದು ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

ಹೌದು 2012ರಲ್ಲಿ ತೆರೆಕಂಡ ‘ಕಾಕ್‌ಟೈಲ್’ ಚಿತ್ರದ ಸೀಕ್ವೆಲ್‌ನಲ್ಲಿ ಶಾಹಿದ್ ಕಪೂರ್‌ಗೆ ಹೀರೋಯಿನ್ ಆಗಿದ್ದಾರೆ. ಸಿಕಂದರ್ ಸಿನಿಮಾ ಫ್ಲಾಪ್ ಆದ್ರೂ ರಶ್ಮಿಕಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಟ್ರಯಾಂಗಲ್ ಲವ್ ಸ್ಟೋರಿ ‘ಕಾಕ್‌ಟೈಲ್ 2’ಗೆ ತಯಾರಿ ನಡೆಯುತ್ತಿದೆ. ಇದರಲ್ಲಿ ಶಾಹಿದ್‌ಗೆ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಇಬ್ಬರು ನಾಯಕಿಯರು ಜೊತೆಯಾಗಲಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣಗೆ ಪವರ್‌ಫುಲ್ ರೋಲ್ ಸಿಕ್ಕಿದೆ.

ದಿನೇಶ್ ವಿಜ್ಞಾನ್ ನಿರ್ಮಾಣದ ‘ಕಾಕ್‌ಟೈಲ್ 2’ಗೆ ಲವ್ ರಂಜನ್ ಕಥೆ ಬರೆದಿದ್ದಾರೆ. ಹೋಮಿ ಅಡಜಾನಿಯಾ ನಿರ್ದೇಶನ ಮಾಡಲಿದ್ದಾರೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಅಂತ್ಯದೊಳಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಸದ್ಯ ರಶ್ಮಿಕಾ ಒಪ್ಪಿಕೊಂಡಿರೋ ಸಿನಿಮಾ ಸುದ್ದಿ ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.


Spread the love

LEAVE A REPLY

Please enter your comment!
Please enter your name here