ಕನ್ನಡದ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಗೆಲ್ಲುವ ಕುದುರೆಯಾಗಿದ್ದಾರೆ. ಒಂದರ ನಂತರ ಒಂದು ಸಿನಿಮಾಗಳಲ್ಲಿ ನಟಿ ಫುಲ್ ಬ್ಯುಸಿಯಾಗಿದ್ದಾರೆ. ಇಷ್ಟು ದಿನಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಟಾಲಿವುಡ್ ಚಿತ್ರರಂಗಕ್ಕೆ ಮತ್ತೆ ಎಂಟ್ರಿಕೊಟ್ಟಿದ್ದಾರೆ.
ರಶ್ಮಿಕಾ ಹಿಂದೆ ನಿರ್ಮಾಪಕರು ತಿರುಗಾಡುತ್ತಿದ್ದಾರೆ. ಆಕೆಯ ಒಂದೇ ಒಂದು ಕಾಲ್ ಶೀಟ್ ಗಾಗಿ ಕಾದು ಕೂತಿದ್ದಾರೆ. ಇದೀಗ ರಶ್ಮಿಕಾ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಗೆ ಜೋಡಿಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಮತ್ತೆ ಟಾಲಿವುಡ್ ನಲ್ಲಿ ಅಲ್ಲು, ರಶ್ಮಿಕಾ ಮೋಡಿ ಮಾಡಲಿದ್ದಾರೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಜೋಡಿ ಮತ್ತೊಂದು ಸಿನಿಮಾಗಾಗಿ ಒಂದಾಗುತ್ತಿದ್ದಾರೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಾಣದ ‘AA22xA6’ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, 2026ರ ಕೊನೆ ಅಥವಾ 2027ರ ಆರಂಭದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಹಾಗೂ ಮೃಣಾಲ್ ಠಾಕೂರ್ ಇರೋದು ಕನ್ಪಾರ್ಮ್ ಆಗಿದೆ. ಇವರ ಜೊತೆ ರಶ್ಮಿಕಾ ಕೂಡ ನಟಿಸುತ್ತಿದ್ದಾರೆ. ಆದರೆ ಈ ಭಾರಿ ರಶ್ಮಿಕಾ ಅಲ್ಲು ಅರ್ಜುನ್ ಗೆ ಜೋಡಿಯಾಗಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ರಶ್ಮಿಕಾಗೆ ಜೋಡಿಯಾಗಿ ಯಾವ ನಟ ಈ ಸಿನಿಮಾದಲ್ಲಿ ನಟಿಸುತ್ತಾರೆ ಕಾದು ನೋಡಬೇಕಿದೆ.