ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಕೇಳಿ ಬರುತ್ತಲೆ ಇದೆ. ಆದರೆ ಈ ಬಗ್ಗೆ ಜೋಡಿಗಳು ಮಾತ್ರ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಈ ಮಧ್ಯೆ ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ಪುಷ್ಪ 2 ಸಿನಿಮಾ ನೋಡಿದ್ದಾರೆ.
ಪುಷ್ಪ 2: ದಿ ರೂಲ್ ಸಿನಿಮಾವನ್ನು ರಶ್ಮಿಕಾ ತನ್ನ ರೂಮರ್ಡ್ ಬಾಯ್ಫ್ರೆಂಡ್ ವಿಜಯ್ ದೇವರಕೊಮಡ ಅವರ ಕುಟುಂಬದೊಂದಿಗೆ ನೋಡಿದ್ದಾರೆ. ವಿಜಯ್ ದೇವರಕೊಂಡ ತಾಯಿ ಹಾಗೂ ತಮ್ಮನೊಂದಿಗೆ ಸಿನಿಮಾ ನೋಡಲು ಹೋಗುತ್ತಿರುವ ರಶ್ಮಿಕಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಶ್ಮಿಕಾ ಹೈದರಾಬಾದ್ನ ಎಎಂಬಿ ಸಿನಿಮಾಸ್ನಲ್ಲಿ (ಏಷಿಯನ್ ಮಹೇಶ್ ಬಾಬು) ಚಿತ್ರ ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್ ಅವರು ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ದೇವರಕೊಂಡ ಇಲ್ಲ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಶೀಘ್ರವೇ ವಿವಾಹ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅವರು ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ವಿಜಯ್ ದೇವರಕೊಂಡ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.