ರತನ್‌ ಟಾಟಾ ಅವರ ನಿಧನ ನನಗೆ ವೈಯಕ್ತಿಕ ನಷ್ಟ: ಸಂಸದೆ ಸುಧಾ ಮೂರ್ತಿ

0
Spread the love

ಬೆಂಗಳೂರು: ರತನ್‌ ಟಾಟಾ ಅವರ ನಿಧನ ನನಗೆ ವೈಯಕ್ತಿಕ ನಷ್ಟ ಎಂದು ಸಂಸದೆ ಸುಧಾ ಮೂರ್ತಿಯವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರತನ್ ಟಾಟಾ ಅವರನ್ನು ಭೇಟಿಯಾಗಿದ್ದೆ. ಅವರು ಪ್ರಾಮಾಣಿಕತೆ, ಸರಳತೆ,

Advertisement

ಯಾವಾಗಲೂ ಇತರರ ಕಾಳಜಿ ವಹಿಸುವ ಮತ್ತು ಸಹಾನುಭೂತಿ ಹೊಂದಿರುವ ವ್ಯಕ್ತಿಯಾಗಿದ್ದರು. ರತನ್‌ ಟಾಟಾ ಅವರದ್ದು ಸಮಗ್ರ ವ್ಯಕ್ತಿತ್ವ, ನಾನು ಅವರ ಮನೆಯಿಂದ ಮಾತ್ರ ಪರೋಪಕಾರವನ್ನು ಕಲಿಯುತ್ತೇನೆ. ಅವರ ನಿಧನ ನನಗೆ ವೈಯಕ್ತಿಕ ನಷ್ಟ ಎಂದು ಹೇಳಿದರು.

ಇನ್ನೂ ರತನ್‌ ಟಾಟಾ ಅವರು ಅಪಾರ ತಾಳ್ಮೆ, ಅಪರೂಪದ ವ್ಯಕ್ತಿತ್ವದ ಮೂಲಕ ಅವರು ದಂತಕಥೆಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದೆ ಸುಧಾ ಮೂರ್ತಿಯವರು ಹೇಳಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here