ರಾಮನಗರ: ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಒಂದು ಹೋಮ್ ಸ್ಟೇಯಲ್ಲಿ ರಾತ್ರೋರಾತ್ರಿ ರೇವ್ ಪಾರ್ಟಿ ನಡೆದಿರುವ ಆರೋಪ ಕೇಳಿಬಂದಿದೆ.
ಮಧ್ಯರಾತ್ರಿ ವೇಳೆ ಪೊಲೀಸರು ಅಚ್ಚರಿ ದಾಳಿ ನಡೆಸಿ 130ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬೆಂಗಳೂರಿನ ಮೂಲದವರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಪಾರ್ಟಿ ವೇಳೆ ಮಾದಕ ವಸ್ತುಗಳ ಬಳಕೆ ನಡೆದಿದೆ ಎನ್ನಲಾಗಿದೆ. ಸುಮಾರು ರಾತ್ರಿ 3 ಗಂಟೆಯ ಸುಮಾರಿಗೆ ಕಗ್ಗಲೀಪುರ ಪೊಲೀಸರು ಸ್ಥಳಕ್ಕೆ ತೆರಳಿ ಪಾರ್ಟಿಯನ್ನು ನಿಲ್ಲಿಸಿ, ಅಲ್ಲಿದ್ದ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ನಂತರ ಬಂಧಿತ ಎಲ್ಲರನ್ನೂ ರಾಮನಗರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್ ಪರೀಕ್ಷೆ ನಡೆಸಲಾಗಿದೆ.
ದಾಳಿ ನಡೆದ ಹೋಮ್ ಸ್ಟೇ ಸುಹಾಸ್ ಗೌಡ ಎಂಬುವವರ ಹೆಸರಿನಲ್ಲಿ ನೋಂದಾಯಿತವಾಗಿದ್ದು, ಪೊಲೀಸರು ಈಗ ಹೋಮ್ ಸ್ಟೇ ಮಾಲೀಕರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಈ ಪಾರ್ಟಿ ಹಿಂದೆ ಯಾರ ಕೈವಾಡವಿದೆ ಎಂಬುದರ ತನಿಖೆ ಮುಂದುವರಿಸಿದ್ದಾರೆ.


