ವಿಜಯಸಾಕ್ಷಿ ಸುದ್ದಿ, ಗದಗ: ಕರುನಾಡ ಸಿಂಗಂ ಖ್ಯಾತಿಯ ಬೆಂಗಳೂರಿನ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಡಿಐಜಿಪಿ ರವಿ ಡಿ.ಚೆನ್ನಣ್ಣವರ ಅವರ 40ನೇ ವರ್ಷದ ಜನ್ಮದಿನದ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದ್ದುಗೆಗೆ ಮಹಾರುದ್ರಾಭೀಷೇಕ, ಮಹಾಪ್ರಸಾದ ವಿತರಣೆಯೊಂದಿಗೆ ಆಚರಿಸಲಾಯಿತು.
ಈ ವೇಳೆ ವೀರೇಶ ವಾಲ್ಮೀಕಿ ಮಾತನಾಡಿ, ಜಿಲ್ಲೆಯ ಹೆಮ್ಮೆಯ ಮಗ ರವಿ ಡಿ.ಚೆನ್ನಣ್ಣವರ ಜನ್ಮದಿನವನ್ನು ಅವರ ಅಭಿಮಾನಿಗಳು ಆಚರಿಸುತ್ತಿದ್ದು, ಅವರು ರಾಜ್ಯ ಕಂಡ ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬಡ ಕೃಷಿ ಕುಟುಂಬದ ಬಂದು, ಕಠಿಣ ಹಾದಿಯಲ್ಲಿ ಬೆಳೆದು ರಾಜ್ಯವೇ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿರುವ ಧೈರ್ಯ, ಶ್ರದ್ಧೆ ಅವರ ಅಭಿಮಾನಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಅನಿಲ ಸಿದ್ದಮ್ಮನಹಳ್ಳಿ, ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ, ಗುರುನಾಥ ದೇಶಪಾಂಡೆ, ಶ್ರೀಕಾಂತ ಪೂಜಾರ, ಪತ್ರಕರ್ತರಾದ ಲೋಕೇಶ ಮಲ್ಲಿಗವಾಡ, ಗದಗ ಜಿಲ್ಲೆಯ 108 ಆಂಬ್ಯುಲೆನ್ಸ್ ವ್ಯವಸ್ಥಾಪಕ ಶ್ರೀನಿವಾಸ ಮುಂದಲಮನಿ, ಈರಣ್ಣ ಕುರಿ, ಈರಣ್ಣ ಅಕ್ಕಿ, ಮಹಾಂತೇಶ, ಇಮಾಮ್ ಡಂಬಳ, ರಾಹುಲ್, ತೇಜಪ್ಪ, ಬಿ.ಡಿ. ಮಾದರ ಮುಂತಾದವರಿದ್ದರು.