ಕಲಬುರಗಿ:: ಶಾಲಿನಿ ರಜನೀಶ್ ವಿರುದ್ಧ ಎಂಎಲ್‌ಸಿ ರವಿ ಕುಮಾರ್ ಅಸಂಸದೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪವಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Advertisement
ರವಿಕುಮಾರ್ ಅವರಿಗೆ ಮುಂಚೆಯಿಂದ ಬಾಯಿ ಚಪಲವಿದೆ. ಕಲಬುರಗಿಯಲ್ಲೂ ಜಿಲ್ಲಾಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೇ ಮಾತಾಡಿದ್ದಾರೆ.
ಅದಕ್ಕೆ ಕೋರ್ಟ್ ಸಹ ಛೀಮಾರಿ ಹಾಕಿದೆ. ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಕೆಟ್ಟ ಮಾತನಾಡುವ ಮೂಲಕ ತಮ್ಮ ಕೊಳಕು ಬುದ್ಧಿ, ಕೊಳಕು ಮನಸ್ಸನ್ನು ರವಿಕುಮಾರ್ ತೋರಿದ್ದಾರೆ. ರವಿಕುಮಾರ್ ಸದನದಲ್ಲಿ ಅಲ್ಲ. ನಿಮ್ಮಾನ್ಸ್’ನಲ್ಲಿ ಇರಬೇಕು ಎಂದು ಲೇವಡಿ ಮಾಡಿದ್ದಾರೆ.