ನಾಡಿಗಾಗಿ ಹೋರಾಡಿದ ರಾಯಣ್ಣ ಸದಾ ಸ್ಮರಣೀಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಶನಿವಾರ ರಾಯಣ್ಣ, ಕಿತ್ತೂರ ಚನ್ನಮ್ಮ ಮತ್ತು ರಾಮನ ಮೂರ್ತಿಯ ಭವ್ಯ ಮೆರವಣಿಗೆ ನೆರವೇರಿತು.

Advertisement

ಮೆರವಣಿಗೆಗೆ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಕುರುಬರ ಸಮಾಜದ ಅಧ್ಯಕ್ಷ ಶೇಖಪ್ಪ ಕಾಳೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜನರನ್ನು ಜಾಗೃತಗೊಳಿಸಿ ನಾಡಿಗಾಗಿ ಹೋರಾಡಿದ ಕೀರ್ತಿ ರಾಯಣ್ಣನವರಿಗೆ ಸಲ್ಲುತ್ತದೆ. ಕಿತ್ತೂರು ರಾಣಿ ಚನ್ನಮ್ಮಳ ಭಂಟನಾಗಿ, ಸದಾ ದೇಶಭಕ್ತನಾಗಿ ನಾಡಿನ ಜನರನ್ನು ಸಂಘಟನೆಯೊಂದಿಗೆ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ಶೂರನಾಗಿದ್ದ. ಕಿತ್ತೂರರಾಣಿ ಚನ್ನಮ್ಮಳ ಹೋರಾಟಕ್ಕೆ ಬೆಂಬಲವಾಗಿ ನಿಂತು ಮೋಸದಿಂದ ವೀರಮರಣವನ್ನು ಹೊಂದಿದ ರಾಯಣ್ಣ ಯುವಕರ ಮನಸ್ಸಿನಲ್ಲಿ ಸದಾ ಉಳಿಯುವಂತಾಗಿದ್ದಾನೆ ಎಂದರು.

ಈ ವೇಳೆ ವಿಜಯಕುಮಾರ ಹತ್ತಿಕಾಳ, ತಿಪ್ಪಣ್ಣ ಸಂಶಿ, ಹೊನ್ನಪ್ಪ ವಡ್ಡರ, ಈರಣ್ಣ ಪೂಜಾರ, ಸುರೇಶ ಹಟ್ಟಿ, ಲೆಂಕೆಪ್ಪ ಶರಸೂರಿ, ಮೌಲಾಲಿ ಎನ್, ಮಂಜು ಮುಳಗುಂದ, ಬಸವರಾಜ ಹಿರೇಮನಿ, ಭರಮಣ್ಣ ಶರಸೂರಿ, ಸಿದ್ದು ದುರಗಣ್ಣವರ, ಮೈಲಾರಿ ಹೆಗ್ಗಣ್ಣವರ, ಮಾಂತೇಶ ಗುದ್ನ್ಯಾಳ, ಮುತ್ತು ಕರ್ಜೆಕಣ್ಣವರ, ಮಲ್ಲಿಕಾರ್ಜುನ ನೀರಾಲೋಟಿ, ವೆಂಕಪ್ಪ ಬಸಾಪುರ, ಸುರೇಶ ಸೂರಣಗಿ, ಶಿವು ಹೊಂಬಳ ಸೇರಿ ಅಭಿಮಾನಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here