ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ಅಂದ್ರೆ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಹೋಮ್ಗ್ರೌಂಡ್ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್ಸಿಬಿ, ಪಂಜಾಬ್ ಕಿಂಗ್ ಮಣಿಸುವ ಕನಸಿನಲ್ಲಿದೆ.
ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿಯೋ ಯುವ ಎಡಗೈ ಬ್ಯಾಟರ್ ಪ್ರಿಯಾಂಶ್, ಮೊದಲ ಬಾಲ್ನಿಂದಲೇ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪಂಜಾಬ್ ಸಕ್ಸಸ್ ಸಿಕ್ರೇಟ್ ಆಗಿರುವ ಈ ಡೆಲ್ಲಿ ಬಾಯ್, 6 ಪಂದ್ಯಗಳಿಂದ 216ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 216 ರನ್ ಸಿಡಿಸಿದ್ದಾರೆ.
ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಈತನಿಗೆ, ಚಿನ್ನಸ್ವಾಮಿಯ ಚಿಕ್ಕ ಗ್ರೌಂಡ್ ನಿಜಕ್ಕೂ ಹೇಳಿ ಮಾಡಿಸಿದಂತಿದೆ. ಅಕಸ್ಮಾತ್ ಇಲ್ಲಿ ಪ್ರಿಯಾಂಶ್ ಸಿಡಿದು ನಿಂತ್ರೆ, ಆರ್ಸಿಬಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈತನಿಗೆ ಆರಂಭದಲ್ಲೇ ಪೆವಿಲಿಯನ್ ಹಾದಿ ತೋರಿಬೇಕಿದೆ. ಈ ನಿಟ್ಟಿನಲ್ಲಿ ಗೇಮ್ಪ್ಲಾನ್ ಮಾಡಬೇಕಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಪ್ರಿಯಾಂಶು ಆರ್ಯ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ. ದೇಸಿಯ ಕ್ರಿಕೆಟ್ನಲ್ಲಿ ಇವರ ಆರ್ಭಟ ಗಮನಿಸಿದ್ದ ಪ್ರೀತಿ ಜಿಂಟಾ, ಬರೋಬ್ಬರಿ 3.80 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.