ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಸೂಪರ್ ಸಂಡೇ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ CSK ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರ ಪ್ರಯೋಜನ ಪಡೆದುಕೊಂಡ RCB ಬ್ಯಾಟ್ಸ್ಮನ್ಗಳು ಸಿಡಿಲಬ್ಬರದ ಆಟ ಪ್ರದರ್ಶಿಸಿ 20 ಓವರ್ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿದರು.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ CSK ವಿರುದ್ಧ 250 ರನ್ ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ RCB ಪಾತ್ರವಾಯಿತು. ಕಳೆದ 18 ವರ್ಷಗಳಲ್ಲಿ CSK ವಿರುದ್ಧ ಯಾವುದೇ ತಂಡ 235 ರನ್ಗಿಂತ ಹೆಚ್ಚು ಗಳಿಸಿರಲಿಲ್ಲ ಎಂಬುದು ವಿಶೇಷ.
ಇದಕ್ಕೂ ಮೊದಲು 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು 2024ರಲ್ಲಿ ಗುಜರಾತ್ ಟೈಟಾನ್ಸ್ ತಂಡಗಳು ತಲಾ 231 ರನ್ ಗಳಿಸಿದ್ದು ಈವರೆಗಿನ ಗರಿಷ್ಠ ಸಾಧನೆ ಆಗಿತ್ತು.
ಆದರೆ ಈ ಬಾರಿ RCB ಬ್ಯಾಟ್ಸ್ಮನ್ಗಳು ಸಿಎಸ್ಕೆ ಬೌಲರ್ಗಳನ್ನು ಚೆಂಡಾಡಿ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು.
ಇದರೊಂದಿಗೆ RCB ತಂಡವು ಐಪಿಎಲ್ನಲ್ಲಿ ಒಟ್ಟು 36 ಬಾರಿ 200+ ರನ್ ಗಳಿಸಿದ ದಾಖಲೆ ನಿರ್ಮಿಸಿ, CSK ದಾಖಲೆಗೆ ಸಮನಾಗಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.



