HomeSports NewsRCB Vs CSK IPL 2025: ರೋಚಕ ಹಣಾಹಣಿಯಲ್ಲಿ ಚೆನ್ನೈ ಮಣಿಸಿದ RCB: ಬೆಂಗಳೂರಿಗೆ 2...

RCB Vs CSK IPL 2025: ರೋಚಕ ಹಣಾಹಣಿಯಲ್ಲಿ ಚೆನ್ನೈ ಮಣಿಸಿದ RCB: ಬೆಂಗಳೂರಿಗೆ 2 ರನ್ ಗಳ ಜಯ!

For Dai;y Updates Join Our whatsapp Group

Spread the love

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಣರೋಚಕ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2 ರನ್ ಗಳಿಂದ ಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ್ದು, ಚೆನ್ನೈಗೆ 214 ರನ್ ಗಳ ಟಾರ್ಗೆಟ್ ನೀಡಿತ್ತು. ಆರ್ ಸಿಬಿ ನೀಡಿದ 214 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿದ್ದು 2 ರನ್ ಗಳಿಂದ ಆರ್ ಸಿಬಿಗೆ ಶರಣಾಯಿತು.

ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಕೋಬ್ ಬೆಥೆಲ್ (55) ಮತ್ತು ವಿರಾಟ್ ಕೊಹ್ಲಿ (62) ಅವರ 97 ರನ್‌ಗಳ ಜೊತೆಯಾಟ ಮತ್ತು ರೊಮಾರಿಯೊ ಶೆಫರ್ಡ್ (14 ಎಸೆತ, ಅಜೇಯ 53, ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್) ಸ್ಫೋಟಕ ಅರ್ಧಶತಕ ದಾಖಲಿಸಿದರು. ಪಂದ್ಯದ ಮೊದಲ ಓವರ್‌ನಿಂದಲೇ ಆರಂಭಿಕರಾದ ಬೆಥೆಲ್ ಮತ್ತು ಕೊಹ್ಲಿ ಆಕ್ರಮಣಕಾರಿಯಾಗಿ ಆಟ ಆರಂಭಿಸಿ ಚೆನ್ನೈ ಬೌಲರ್‌ಗಳನ್ನು ಸದೆಬಡಿದು ಸ್ಕೋರ್‌ಬೋರ್ಡ್ ಅನ್ನು ವೇಗವಾಗಿ ಚಲಿಸುವಂತೆ ಮಾಡಿದರು. ಪರಿಣಾಮ ಆರ್ ಸಿಬಿ 213 ರನ್ ಕಲೆಹಾಕಲು ಸಾಧ್ಯವಾಯಿತು. ಚೆನ್ನೈ ಪರ ಆಯುಷ್ ಮ್ಹಾತ್ರೆ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 94 ರನ್ ಗಳಿಗೆ ಔಟಾಗಿ ಶತಕ ವಂಚಿತರಾದರು. ಇನ್ನು ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿದ್ದು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಒಟ್ಟಾರೆ ತವರಲ್ಲಿ ಮತ್ತೊಂದು ಗೆಲುವು ದಾಖಲಿಸಿರುವ ಆರ್ ಸಿಬಿ ಈಗ ಟೇಬಲ್ ಟಾಪರ್ ಆಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!