IPL Auction 2025: ವಿಲ್​ ಜಾಕ್ಸ್​ ಖರೀದಿ ಮಾಡದ ಆರ್​​ಸಿಬಿ: ಪ್ರಾಂಚೈಸಿ ನಿರ್ಧಾರಕ್ಕೆ ಫ್ಯಾನ್ಸ್ ಸಿಡಿಮಿಡಿ!

0
Spread the love

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​ ಅವರಿಗೆ ಮಣೆ ಹಾಕಿದೆ. ಆರ್​​ಸಿಬಿ ಆಟಗಾರನಿಗೆ ಬರೋಬ್ಬರಿ 5.25 ಕೋಟಿ ನೀಡಿ ಖರೀದಿ ಮಾಡಿದೆ.

Advertisement

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್​ಸಿಬಿ, ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತಂಡಕ್ಕೆ ಯಾವ್ಯಾವ ಆಟಗಾರರು ಬರಬೇಕೆಂದು ಅಭಿಮಾನಿಗಳು ಬಯಸಿದ್ದರೋ, ಆ ಯಾವ ಆಟಗಾರರನ್ನು ಆರ್​​ಸಿಬಿ ಖರೀದಿಸಿಲ್ಲ.

ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ಆರ್​ಸಿಬಿ, ಮಿಕ್ಕ ಮೂವರು ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಆರ್​ಟಿಎಮ್ ಬಳಸಿಕೊಂಡು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಅಭಿಮಾನಿಗಳು ನಿರೀಕ್ಷಿಸಿದ್ದ ಆ ಹೆಸರಿನಲ್ಲಿ ಪ್ರಮುಖ ಹೆಸರೆಂದರೆ ಅದು ಇಂಗ್ಲೆಂಡ್​ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್. ಅಭಿಮಾನಿಗಳ ಹೊರತಾಗಿ ಕ್ರಿಕೆಟ್ ಪಂಡಿತರು ಕೂಡ ಆರ್​ಸಿಬಿ, ವಿಲ್ ಜ್ಯಾಕ್ಸ್​ರನ್ನು ಆರ್​ಟಿಎಮ್ ಬಳಸಿ ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆಗಳು ಹುಸಿಯಾಗಿಸಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುವ ಆಟಗಾರರ ಪಟ್ಟಿಯಲ್ಲಿ ವಿಲ್ ಜ್ಯಾಕ್ಸ್ ಅವರ ಹೆಸರಿತ್ತು. ಅದರಂತೆ ಹರಾಜಿನ ಎರಡನೇ ದಿನ ಹರಾಜಿಗೆ ಬಂದ ವಿಲ್ ಜ್ಯಾಕ್ಸ್​ರನ್ನು ಖರೀದಿಸಲು ಮುಂಬೈ ಹಾಗೂ ಪಂಜಾಬ್ ನಡುವೆ ಪೈಪೋಟಿ ಏರ್ಪಟ್ಟಿತ್ತು.

ಅಂತಿಮವಾಗಿ ಮುಂಬೈ ಜ್ಯಾಕ್ಸ್​ಗೆ 5.25 ಕೋಟಿ ರೂ. ನೀಡಲು ಮುಂದಾಯಿತು. ಈ ವೇಳೆ ಆರ್​ಸಿಬಿ ಆರ್​ಟಿಎಮ್ ಬಳಸಿ ವಿಲ್ ಜ್ಯಾಕ್ಸ್​ರನ್ನು ಮತ್ತೆ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬುದು ಎಲ್ಲರ ಧೃಡ ನಿರೀಕ್ಷೆಯಾಗಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದ ಆರ್​ಸಿಬಿ, ಜ್ಯಾಕ್ಸ್ ಮೇಲೆ ಆರ್​ಟಿಎಮ್ ಬಳಸಲೇ ಇಲ್ಲ.

ಆರ್​ಸಿಬಿಯ ಈ ನಿರ್ಧಾರ ಕಂಡು ಒಂದು ಕ್ಷಣ ಇಡೀ ಮುಂಬೈ ಪಾಳಯವೇ ಅಚ್ಚರಿ ವ್ಯಕ್ತಪಡಿಸಿತು. ಕೆಲವು ಹೊತ್ತು ಅಚ್ಚರಿಯಿಂದಲೇ ಕುಳಿತಿದ್ದ ಮುಂಬೈ ತಂಡದ ಸದಸ್ಯರು, ಜ್ಯಾಕ್ಸ್ ನಮ್ಮ ತಂಡಕ್ಕೆ ಸೇರಿದರೆಂಬ ಸಂತಸದಲ್ಲಿ ಒಬ್ಬರನ್ನೊಬ್ಬರು ಕೈಕುಲುಕಿ ಹರ್ಷ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here