ಬಿಗ್ಬಾಸ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ವಾರ ಮಿಡ್ ವೀಕ್ ಎಲಿಮಿನೇಶನ್ ಇದೆ ಎಂದು ಹೇಳಲಾಗಿತ್ತಾದರೂ ಆದ್ರೆ ಕೈ ಬಿಡಲಾಗಿದೆ. ಇದನ್ನು ಕೈ ಬಿಟ್ಟಿದ್ದು ಒಳ್ಳೆದಾಯಿತು ಎನ್ನುವಷ್ಟರಲ್ಲಿ ಡಬಲ್ ಎಲಿಮಿನೇಶನ್ ಇದೆ ಹೇಳಲಾಗುತ್ತಿದೆ. ಹೀಗಾಗಿ ಮನೆಯಲ್ಲಿರುವ ಸ್ಪರ್ಧಿಗಳು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಈ ಆತಂಕವನ್ನು ದೂರ ಮಾಡಲು ಇದೇ ಸೀಸನ್ನಿಂದ ಎಲಿಮಿನೇಟ್ ಆಗಿದ್ದ ಕೆಲ ಸ್ಪರ್ಧಿಗಳು ಮತ್ತೆ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ತಾವು ಹೇಗೆ ಮನೆಯಿಂದ ಹೊರ ಹೋಗಲಾಯಿತು ಎಂಬುದನ್ನು ಸ್ಪರ್ಧಿಗಳು ವಿವರಿಸಿದ್ದಾರೆ. ಇದರಿಂದ ಪ್ರಸ್ತುತ ಮನೆಯಲ್ಲಿರುವ ಕೆಲವರಿಗೆ ನೋವಾಗಿದೆ. ರೀ ಎಂಟ್ರಿ ಕೊಟ್ಟ ಸ್ಪರ್ಧಿಗಳ ಮಾತು ಕೇಳಿ ಉಗ್ರಂ ಮಂಜು ಕೈಮುಗಿದಿದ್ದಾರೆ.
ಬಿಗ್ ಬಾಸ್‌ನಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತೆ ಮನೆಗೆ ಗೆಸ್ಟ್‌ಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅವರು ವಾಪಸ್ ಆಗಿದ್ದಾರೆ. ಮನೆಗೆ ಬಂದ ಗೋಲ್ಡ್ ಸುರೇಶ್‌ಗೆ ಕುಚುಕು ಗೆಳೆಯರು ಹನುಮಂತ, ಧನರಾಜ್ ಮುತ್ತು ಕೊಟ್ಟು ಸ್ವಾಗತಿಸಿದ್ದಾರೆ. ತ್ರಿವಿಕ್ರಮ್ ಅಂತೂ ಮಾನಸ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು.
ಬಿಗ್ ಬಾಸ್‌ನಲ್ಲಿ ಸಿಹಿ ಕಹಿ ಅನುಭವಗಳು, ಕೂಡಿಟ್ಟುಕೊಂಡ ನೆನಪುಗಳು ಬಹಳಿಷ್ಟಿವೆ. ಕೆಟ್ಟ ಘಟನೆಗಳು ಸಾಕಷ್ಟು ಇವೆ. ಮನೆಯಿಂದ ಹೊರ ಹೋಗಲು ಯಾರು ಕಾರಣ ಎಂದು ಎಲಿಮಿನೇಟ್ ಆದ ಸ್ಪರ್ಧಿಗಳು ಹೇಳಿದ್ದಾರೆ. ಕೇವಲ ಉಪ್ಪಿಕಾಯಿ ಎತ್ತಿಕೊಂಡೆ ಎನ್ನುವ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡಿದರು ಗೌತಮಿ ಎಂದು ಗೋಲ್ಡ್ ಸುರೇಶ್ ನೇರವಾಗಿ ಹೇಳಿದ್ದಾರೆ. ಇನ್ನು ಹಂಸ ಕೂಡ ಮಾತನಾಡಿ, ಮಂಜು ಅವರು ತುಂಬಾ ಸಲ ನನ್ನನ್ನು ಹರ್ಟ್ ಮಾಡಿದ್ದಾರೆ ಎಂದಿದ್ದಾರೆ. ಯಾಕೆ ನನ್ನ ಜೊತೆನೇ ಮಂಜು ಜಗಳ ಮಾಡ್ತಾರೆ ಅನಿಸುತ್ತಿತ್ತು ಎಂದು ಮಾನಸ ಹೇಳಿದ್ದಾರೆ.
ರಾಜರ ಟಾಸ್ಕ್‌ನಲ್ಲಿ ಎಳೆದು ನನ್ನನ್ನು ಪಕ್ಕಕ್ಕೆ ಹಾಕಿದ್ದು ಈಗಲೂ ನನಗೆ ನೋವು ಇದೆ ಎಂದು ಮಂಜು ವಿರುದ್ಧ ಶಿಶಿರ್ ಮಾತನಾಡಿದ್ದಾರೆ. ಮನೆಗೆ ಬಂದವರು ಮಂಜು ಮೇಲೆಯೇ ಹೆಚ್ಚಿನ ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಮಂಜು ಅವರು 4ರಿಂದ 5 ವಾರ ಮಂಜು ಹೇಗಿದ್ದ, ಈಗ ಯಾಕೋ ಆ ರೀತಿ ಕಾಣಿಸುತ್ತಿಲ್ಲ ಎನ್ನುವುದಕ್ಕೆ ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ ಎಂದು ರೀ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಕೈಮುಗಿದಿದ್ದಾರೆ.