ಕನಕದಾಸರ ಕೀರ್ತನೆಗಳನ್ನು ಓದಿ ತಿಳಿದುಕೊಳ್ಳಿ: ಪ್ರೊ. ಬಿ.ಡಿ. ಕುಂಬಾರ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಹದಿನಾರನೆಯ ಶತಮಾನದಲ್ಲಿಯೇ ಸಮಾನತೆಯ ಮಂತ್ರ ಸಾರಿದವರು ಕನಕದಾಸರು. ಧರ್ಮ ಜಾತಿಗಳಗಳ ಮಧ್ಯೆ ಸ್ಪರ್ಧೆ ಏರ್ಪಡದೇ ಸಾಮರಸ್ಯದಿಂದ ಪ್ರತಿಯೊಬ್ಬರೂ ಬಾಳಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.

Advertisement

ಕವಿವಿ ಕನಕ ಅಧ್ಯಯನ ಪೀಠದ ಆಶ್ರಯದಲ್ಲಿ ಕನಕ ಜಯಂತಿಯ ಅಂಗವಾಗಿ ಶನಿವಾರ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಆಶ್ರಯದಲ್ಲಿ ಕನಕ ಜಯಂತಿಯ ನಿಮಿತ್ತ ‘ಕನಕದಾಸರ ತಾತ್ವಿಕತೆ: ಆಧುನಿಕ ಸಮಾಜದ ಪರಿಕಲ್ಪನೆ’ ವಿಷಯ ಕುರಿತ ಏರ್ಪಡಿಸಲಾಗಿದ್ದ ಒಂದು ದಿನದ ರಾಷ್ಟಿçÃಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಪೀಳಿಗೆಯವರು ಕನಕದಾಸರ ಕೀರ್ತನೆಗಳನ್ನು ಓದಿ ತಿಳಿದುಕೊಳ್ಳಬೇಕು. ಬಸವ, ಬುದ್ಧ, ಅಂಬೇಡ್ಕರರ ವಿಚಾರಗಳನ್ನು ತಮ್ಮ ಸಾಹಿತ್ಯದಲ್ಲಿ ಮನುಕುಲದ ಉದ್ಧಾರಕ್ಕೆ ಕನಕದಾಸರು ತಿಳಿಸಿ ಹೇಳಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ. ಬಿ.ಎಂ. ಪಾಟೀಲ, ಡಾ.ಅಂಬೇಡ್ಕರರ ಆಶಯಗಳು ಕನಕದಾಸರ ಸಾಹಿತ್ಯದಲ್ಲಿವೆ ಎಂದು ಹೇಳಿದರು. ಡಾ.ಶಶಿಧರ ಜಿ. ವೈದ್ಯ ಕನಕದಾಸ: ಎ ವಿಜನರಿ ಆಫ್ ಹಾರ್ಮನಿ’ ಇಂಗ್ಲೀಷ್ ಕೃತಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಮಾಜಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ರವಿ ಮಾಳಿಗೇರ, ಡಿ.ಡಿ. ಮಾಳಗಿ ಉಪಸ್ಥಿತರಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ.ನಿಜಲಿಂಗಪ್ಪ ವಾಯ್.ಮಟ್ಟಿಹಾಳ ಸ್ವಾಗತಿಸಿದರು. ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಕನಕ ಅಧ್ಯಯನ ಪೀಠದ ಸಂಯೋಜಕ ಡಾ.ಹನಮಗೌಡ ಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ವೇದಮೂರ್ತಿ ಎ.ಬಿ ಪರಿಚಯಿಸಿದರು. ಡಾ.ಅನಿತಾ ಹಾಲಮತ ನಿರೂಪಿಸಿದರು. ಕಲಾನಿಕಾಯ, ಡೀನ್ ಪ್ರೊ. ಮೃತ್ಯುಂಜಯ ಅಗಡಿ ವಂದಿಸಿದರು.

ಆಶಯ ಭಾಷಣ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ, ಕನಕದಾಸರನ್ನು ದೈವತ್ವಕ್ಕೆ ಹೋಲಿಸಿ ಜನರಿಂದ ದೂರ ಇಡಲು ಪ್ರಯತ್ನಿಸಲಾಗುತ್ತಿದೆ. ಹೀಗೆ ಮಾಡಬಾರದು ಎಂದು ಹೇಳಿದ ಅವರು, ಸಣ್ಣ ಕೀರ್ತನೆಗಳ ಮೂಲಕ ಇಡೀ ಭಾರತದ ಸಂಪ್ರದಾಯವನ್ನು ಕನಕದಾಸರು ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಕನಕದಾಸರು ಬಹಳ ಹಿಂದೆಯೇ ಟೀಕಿಸಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here