ಬೆಂಗಳೂರು: ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಜಾತಿ ಜನಗಣತಿ ವಿಚಾರ ಇದೀಗ ಕುತೂಹಲದ ಘಟ್ಟಕ್ಕೆ ತಲುಪಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತಾಗಿ ಬಹಿರಂಗಗೊಳ್ಳುತ್ತಿರುವ ಅಂಕಿ- ಸಂಖ್ಯೆಗಳು ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಕಾರಣವಾಗುತ್ತಿದೆ. ಇದೀಗ ಸಿಎಂ ನನಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇದೆ ಎಂದು ಹೇಳಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಎ. ಮಂಜು ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿ ಜನಗಣತಿ ಮಾಡಬೇಕಿದ್ದು ಕೇಂದ್ರ ಸರ್ಕಾರ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ.
ಇಂತಹ ಸಮೀಕ್ಷೆಯಲ್ಲಿ ಜಾತಿಗಣತಿ ಯಾಕೆ ಮಾಡಿದ್ದು ಯಾಕೆ? ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇರೋದಕ್ಕೆ ಇವೆಲ್ಲ ಮಾಡ್ತಿದ್ದಾರೆ. ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ. ಇದು ಸರಿಯಲ್ಲ, ಈ ಜಾತಿ ಜನಗಣತಿ ವರದಿ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಈ ಜಾತಿ ಜನಗಣತಿ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸಲ್ಲ. ನನಗೆ ಸಮುದಾಯದ ಮುಖ್ಯ, ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ ಎಂದು ಹೇಳಿದ್ದಾರೆ.