ಕನ್ನಡ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ಉಪ್ಪಿ ಮಗ ಆಯುಷ್ ಎಂಟ್ರಿ: ನಿರ್ದೇಶಕರು ಯಾರು ಗೊತ್ತಾ?

0
Spread the love

ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಕಾಮನ್‌ ಆಗಿದೆ. ಚಿತ್ರರಂಗಕ್ಕೆ ಎಂಟ್ರಿಕೊಡುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡಿರ್ತಾರೆ. ಅಂತೆಯೇ ಇದೀಗ ರಿಯಲ್‌ ಸ್ಟಾರ್‌ ಉಪೇಂದ್ರ ಪುತ್ರ ಆಯುಷ್‌ ಸರದಿ. ಯೆಸ್.‌ ಉಪೇಂದ್ರ ಮಗ ಆಯುಷ್‌ ಚಿತ್ರರಂಗಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದು ಮಗನ ಹುಟ್ಟುಹಬ್ಬದ ದಿನವೇ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ನಡೆದಿದೆ.

Advertisement

ಯಶ್ ಸಿನಿಮಾ ನಿರ್ದೇಶನ ಮಾಡಿದ ನಿರ್ದೇಶಕರು ಆಯುಷ್​ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಯಶ್ ಹಾಗೂ ಭಾಮಾ ಒಟ್ಟಾಗಿ ನಟಿಸಿದ್ದ ‘ಮೊದಲ ಸಲ’ ಚಿತ್ರವನ್ನು ಪುರುಷೋತ್ತಮ್ ಡೈರೆಕ್ಷನ್ ಮಾಡಿದ್ದು ಇದೀಗ ಅದೇ ನಿರ್ದೇಶಕರು ಆಯುಷ್‌ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಜ್ಜಾಗಿದ್ದಾರೆ.

ಉಪೇಂದ್ರ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ದೇಶಕರಾಗಿ ಹೆಸರು ಮಾಡಿ ಆ ಬಳಿಕ ನಾಯಕರಾಗಿಯೂ ಚಿತ್ರರಂಗದಲ್ಲಿ ಕಮಾಲ್‌ ಮಾಡಿದ್ದಾರೆ. ಆಯುಷ್ ತಾಯಿ ಪ್ರಿಯಾಂಕಾ ಉಪೇಂದ್ರ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಇಬ್ಬರು ತಮ್ಮ ಮಗನನ್ನು ಗ್ರ್ಯಾಂಡ್‌ ಆಗಿ ಸ್ಯಾಂಡಲ್‌ ವುಡ್‌ ಚಿತ್ರರಂಗಕ್ಕೆ ಪರಿಚಯ ಮಾಡಿಸಲು ಸಜ್ಜಾಗಿದ್ದಾರೆ.

ಆಯುಷ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಮಂತ್ರಾಲಯಕ್ಕೆ ಉಪ್ಪಿ ಕುಟುಂಬ ಹಾಗೂ ನಟಿ ತಾರಾ ಕುಟುಂಬ ಭೇಟಿ ನೀಡಿದೆ. ತಾರಾ ಪತಿ ವೇಣು ಗೋಪಾಲ್ ಉಪ್ಪಿ ಪುತ್ರನ ಮೊದಲ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ.


Spread the love

LEAVE A REPLY

Please enter your comment!
Please enter your name here