ಮಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ UI ಚಿತ್ರದ ವಾರ್ನರ್ ರಿಲೀಸ್ ಆಗಿದೆ. ರಿಲೀಸ್ ಆದ ವಾರ್ನರ್ ಇದೀಗ ಸಾಕಷ್ಟು ವಿಷಯಗಳನ್ನ ಹೇಳುತ್ತಿದೆ. ಇನ್ನೂ ಉಪೇಂದ್ರ ಯುಐ ಸಿನಿಮಾ ಗೆಲುವಿಗಾಗಿ ಬುದ್ದಿವಂತ ಉಪ್ಪಿ ದೇವರ ಮೊರೆ ಹೋಗಿದ್ದಾರೆ. ಹೌದು ಮಂಗಳೂರಿನ ಪ್ರಸಿದ್ಧ ದೇವಸ್ಥಾನದ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದಾರೆ.
Advertisement
ಕಟೀಲಿಗೆ ಭೇಟಿ ಕೊಟ್ಟ ನಟ ಉಪೇಂದ್ರ ಅವರು ದುರ್ಗಾ ಪರಮೇಶ್ವರಿಯ ದರ್ಶನ ಪಡೆದಿದ್ದಾರೆ. ಮಧ್ಯಾನ ಕೊರಗಜ್ಜ ದೇವರ ದರ್ಶನ ಪಡೆದುಕೊಂಡು ಸಂಜೆ ಮಂಗಳೂರಿನಲ್ಲಿ ಉಪೇಂದ್ರ UI ಪತ್ರಿಕಾಗೋಷ್ಠಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಉಪೇಂದ್ರ ನಟಿಸಿ ನಿರ್ದೇಶಿಸಿರುವ UI ಸಿನಿಮಾ ಇದೇ ತಿಂಗಳ 20 ಕ್ಕೆ ರಿಲೀಸ್ ಆಗಲಿದೆ.