ಬೀದರ್;- ಜಗಳ ತಡೆಯಲು ಹೋಗಿದ್ದ ಪೊಲೀಸರ ಮೇಲೆ ಯುವಕರ ಗುಂಪು ಅಟ್ಯಾಕ್ ಮಾಡಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದಲ್ಲಿ ಜರುಗಿದೆ.ಮಹಾಲಕ್ಷ್ಮಿ ಜಾತ್ರೆಯ ಮೆರವಣಿಗೆ ವೇಳೆ ಯುವಕರ ಎರಡು ಗುಂಪುಗಳ ಮಧ್ಯ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಗಲಾಟೆ ತಡೆಯಲು ಪೊಲೀಸರ ತಂಡ ಆಗಮಿಸಿದೆ. ಈ ವೇಳೆ ಪುಂಡರ ಗುಂಪು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ದುಷ್ಕೃತ್ಯ ಮೆರೆದಿದ್ದಾರೆ.
ಕಲ್ಲೂ ತೂರಾಟದಲ್ಲಿ ಇಬ್ಬರು ಪೇದೆಗಳಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.



