ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಜಪಾನ್ ದೇಶದ ಟೋಕಿಯೊದಲ್ಲಿ ವಿಶ್ವವಾಣಿ ದಿನಪತ್ರಿಕೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡಿದ `ವಿಶ್ವವಾಣಿ’ ಗ್ಲೋಬಲ್ ಅಚಿವರ್ಸ್ ಅವಾರ್ಡ್-2024 ಪ್ರಶಸ್ತಿ ಸ್ವೀಕರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳಾದ ಡಾ. ಬಸವರಾಜ ಬಳ್ಳಾರಿ ಅವರು ಇತ್ತೀಚೆಗೆ ನಡೆದ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ನಿಮಿತ್ತ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗದಗ ತಾಲೂಕು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸನ್ಮಾಸಿ ಗೌರವಿಸಲಾಯಿತು.
Advertisement
ಈ ಸಂದರ್ಭದಲ್ಲಿ ಹನುಮಂತ ನಾಗರಹಳ್ಳಿ, ಮಹಾಂತೇಶ ಅಂಗಡಿ, ಬಸವರಾಜ ಲಾಳಿ, ಬಸವರಾಜ ಪೂಜಾರ, ಮಂಜುನಾಥ ನಿಡಗುಂದಿ, ಮಹಾಂತೇಶ ಹಾದಿಮನಿ, ರಫೀಕ ಕರ್ನಾಚಿ, ಸುರೇಶ್ ಬಂಡಿವಡ್ಡರ, ಸುದೀಪ್ ಚವ್ಹಾಣ ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.