ಜೈಪುರ:- ರಾಜಸ್ತಾನದ ರಾಜಧಾನಿ ಜೈಪುರ್ನ ಲೋಹಮಂಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಮದ್ಯಪಾನ ಮಾಡಿ ಬೆಂಜ್ ಲಾರಿ ಚಲಾಯಿಸುತ್ತಿದ್ದ ಚಾಲಕ, 17 ವಾಹನಗಳಿಗೆ ರಣಭೀಕರವಾಗಿ ಗುದ್ದಿದ್ದಾನೆ. ಇದರ ಪರಿಣಾಮ 14 ಜನರು ಪ್ರಾಣ ಬಿಟ್ಟಿದ್ದು 13 ಜನರ ಸ್ಥಿತಿ ಚಿಂತಾಜನಕವಾಗಿದೆ.
ಹರ್ಮಾಡಾ ಪ್ರದೇಶದ ಲೋಹಮಂಡಿ ಬಳಿ ಟ್ರಾಫಿಕ್ ಇದ್ದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ 100 ಕಿಲೋ ಮೋಟರ್ ವೇಗದಲ್ಲಿ ಬಂದ ಬೆಂಜ್ ಲಾರಿ ಟ್ರಾಫಿಕ್ನಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ನುಗ್ಗಿಕೊಂಡು ಹೋಗಿದೆ. ಇದರಿಂದ ಕಾರು, ಬೈಕ್, ವ್ಯಾನ್, ಆಟೋ ಸೇರಿ 17 ವಾಹನಗಳು ನಜ್ಜುಗುಜ್ಜಾಗಿವೆ. ಘಟನೆಯಲ್ಲಿ 14 ಜನ ಪ್ರಾಣ ಬಿಟ್ಟಿದ್ದು 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ನಗರದ ಎಸ್ಎಮ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.



