ತಮ್ಮ ವಿರುದ್ಧ ಪ್ರಾಸಿಕ್ಯೂಶನ್’ಗೆ ಶಿಫಾರಸು ವಿಚಾರ: ಬಿಎಸ್ ಯಡಿಯೂರಪ್ಪ ಹೇಳಿದ್ದೇನು..?

0
Spread the love

ಬಳ್ಳಾರಿ: ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಶನ್ ಅನುನತಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರ ಪ್ರಾಸಿಕ್ಯೂಶನ್ ಗೆ ಶಿಫಾರಸು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೋವಿಡ್ ಹಗರಣದ ಕುರಿತು ಸರಕಾರ ಪ್ರಾಸಿಕ್ಯೂಶನ್ ಅನುನತಿಗೆ ಶಿಫಾರಸು ಮಾಡಿರುವುದರ ಹಿಂದೆ ರಾಜಕೀಯ ‌ದುರುದ್ದೇಶವಿದೆ‌ ಎಂದು ಹೇಳಿದರು.

Advertisement

ನಾವು ಯಾವ ಹಗರಣವನ್ನೂ‌ ಮಾಡಿಲ್ಲ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಯಾವ ತನಿಖೆಗೂ ಬೇಕಿದ್ದರೆ ಕೊಡಲಿ ಎಂದ ಯಡಿಯೂರಪ್ಪ, ರಾಜ್ಯದ ಮೂರು ಕ್ಷೇತ್ರಗಳಲ್ಲಿ ‌ನಿರೀಕ್ಷೆ ಮೀರಿ ಜನ ಬೆಂಬಲ ಸಿಗುತ್ತಿದೆ. ಮೋದಿ ಅವರ ಅಪಾರ ಪ್ರಭಾವ ಕೆಲಸ‌ ಮಾಡಲಿದೆ. ಮೂರಕ್ಕೂ ಮೂರು  ಕ್ಷೇತ್ರದಲ್ಲಿ ಗೆಲುವು ಸಿಗಲಿದೆ ಎನ್ನುವ ವಿಶ್ವಾಸವಿದೆ. ನನ್ನ ಅಧಿಕಾರ ಅವಧಿಯಲ್ಲಿ ‌ಯಾವ ಹಗರಣವೂ‌ ನಡೆದಿಲ್ಲ.

ಎಲ್ಲವೂ ಕಾನೂನು ಚೌಕಟ್ಟಿನಲ್ಲಿ ಅನುಷ್ಠಾನ ಮಾಡಿದ್ದೇವೆ. ದುರುದ್ದೇಶ‌‌ ಪೂರಕವಾಗಿ ಕೇಸ್ ದಾಖಲಿಸುವುದು,‌ ವಿಚಾರಣೆಗೆ ಅನುಮತಿ ‌ನೀಡುವುದು ನಡೆದಿದೆ.‌ಶ್ರೀರಾಮುಲು ಕೋವಿಡ್ ನಲ್ಲಿ ‌ಯಾವುದೇ ಹಗರಣ ಮಾಡಿಲ್ಲ. ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಶನ್ ಅನುನತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ‌ ಶುರುವಾಗಿದೆ. ಇಡೀ ಕ್ಯಾಬಿನೆಟ್ ‌ಜತೆ ಇಲ್ಲಿ ಕುಂತಿದ್ದಾರೆ ಮತ್ತು ರಾಮುಲು ಮೇಲೂ‌ ದುರುದ್ದೇಶ ಪೂರ್ವಕ ಪ್ರಾಸಿಕ್ಯೂಶನ್ ಅನುಮತಿ ‌ನೀಡಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here