ದಾಖಲೆ ಬರೆದ ಧಾರವಾಡ ಕೃಷಿ ಮೇಳ: ನಾಲ್ಕೇ ದಿನದಲ್ಲಿ 23.7 ಲಕ್ಷ ಜನರ ಭೇಟಿ

0
Spread the love

ಧಾರವಾಡ:– ಧಾರವಾಡದ ಕೃಷಿ ಮೇಳಕ್ಕೆ ಮಂಗಳವಾರ ತೆರೆಬಿದ್ದಿದ್ದು, ನಾಲ್ಕೇ ದಿನದಲ್ಲಿ 23.7 ಲಕ್ಷ ಜನರು ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಈ ಮೇಳ ಆಯೋಜನೆ ಮಾಡಲಾಗಿತ್ತು.

Advertisement

ಈ ವರ್ಷ ಸೆ.13ರಿಂದ ಸೆ.16ರವರೆಗೆ ಕೃಷಿ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಾಖಲೆಯ ಜನರು ಭೇಟಿ ನೀಡಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ ಈ ಕೃಷಿ ಮೇಳಕ್ಕೆ ಬರೋಬ್ಬರಿ 23.74 ಲಕ್ಷ ಜನ ಭೇಟಿ ನೀಡಿದ್ದರು.

ಮೊದಲ ದಿನ ಶನಿವಾರ (ಸೆ.13) 3.65 ಲಕ್ಷ ಜನ, ಎರಡನೇ ದಿನ ಭಾನುವಾರ (ಸೆ.14) 7.74 ಲಕ್ಷ, ಮೂರನೇ ದಿನ ಸೋಮವಾರ (ಸೆ.15) 8.6 ಲಕ್ಷ ಹಾಗೂ ಕೊನೆಯ ದಿನ ಮಂಗಳವಾರ (ಸೆ.16) 3.75 ಲಕ್ಷ ಜನ ಸೇರಿ ಒಟ್ಟು 23.74 ಲಕ್ಷ ಜನ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here